ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ʼಲವಂಗದ ಎಲೆʼ ಕಷಾಯ, ಆರೋಗ್ಯಕ್ಕಿದೆ ಹತ್ತಾರು ಪ್ರಯೋಜನ

ಪ್ರತಿ ಮನೆಯಲ್ಲೂ ಮಸಾಲೆಗಳನ್ನು ಬಳಸುತ್ತಾರೆ. ಆಹಾರದ ರುಚಿ ಹೆಚ್ಚಿಸುವುದೇ ಮಸಾಲೆಗಳು. ಆದರೆ ಇದೊಂದು ಮಸಾಲೆ ಪದಾರ್ಥ ಕೇವಲ ಅಡುಗೆಗೆ ಮಾತ್ರವಲ್ಲ ಆರೋಗ್ಯ ಮತ್ತು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಲವಂಗದ ಎಲೆಯಲ್ಲಿ ಔಷಧಿಗಳ ನಿಧಿಯೇ ಇದೆ. ಲವಂಗದ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅದ್ಭುತ ಪ್ರಯೋಜನಗಳು ಸಿಗುತ್ತವೆ.  ಲವಂಗದ ಎಲೆಗಳಲ್ಲಿ ಅನೇಕ ಅಗತ್ಯ ಪೋಷಕಾಂಶಗಳಿವೆ.

ವಿಟಮಿನ್‌ ಎ, ಬಿ, ಸಿ, ಇ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮುಂತಾದ ಹಲವು ಪೋಷಕಾಂಶಗಳನ್ನು ಹೊಂದಿರುವ ಲವಂಗದ ಎಲೆಗಳು ದೇಹದಲ್ಲಿನ ವಿಟಮಿನ್‌ ಕೊರತೆಯನ್ನು ನೀಗಿಸುತ್ತವೆ. ಲವಂಗದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುವ ಮೂಲಕ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಕೂಡ ಇಳಿಯುತ್ತದೆ.

ಈ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ನಿಯಂತ್ರಿಸಬಲ್ಲದು. ಅಷ್ಟೇ ಅಲ್ಲ ಇದು ಮೂತ್ರಪಿಂಡದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಯಾಕಂದ್ರೆ ಲವಂಗದ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ  ಮೂತ್ರಪಿಂಡವನ್ನು ಫಿಲ್ಟರ್ ಮಾಡಬಹುದು. ಕಿಡ್ನಿ ಚೆನ್ನಾಗಿ  ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಈ ನೀರನ್ನು ಕುಡಿಯುವುದರಿಂದ ನಿದ್ರಾಹೀನತೆ, ರಾತ್ರಿಯಲ್ಲಿ ಆಗಾಗ್ಗೆ ಎಚ್ಚರಗೊಳ್ಳುವುದು ಮತ್ತು ಚಡಪಡಿಕೆ ಮುಂತಾದ ಸಮಸ್ಯೆಗಳು ದೂರವಾಗುತ್ತವೆ.

ಲವಂಗದ ಕಷಾಯ ತಯಾರಿಸುವುದು ಹೇಗೆ?

ಒಂದು ಪಾತ್ರೆಯಲ್ಲಿ ಒಂದೂವರೆ ಗ್ಲಾಸ್‌ ನೀರು ತೆಗೆದುಕೊಳ್ಳಿ. ಅದಕ್ಕೆ ಮೂರ್ನಾಲ್ಕು ಲವಂಗದ ಎಲೆಗಳನ್ನು ಹಾಕಿ ಕುದಿಸಿ. ಒಂದೂವರೆ ಲೋಟಗಳಷ್ಟಿದ್ದ ನೀರು ಮುಕ್ಕಾಲು ಲೋಟವಾಗುವಷ್ಟು ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ. ಅದು ಉಗುರು ಬೆಚ್ಚಗಾದಾಗ ಅದಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಕುಡಿಯಿರಿ. ಇದು ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read