ಕ್ಯಾಂಪೇನಿಯಾದ ನೇಪಲ್ಸ್ ಮೂಲದ ಬೇಟೆಗಾರ ಜೇಕ್ ವಾಲೆರಿ ತಮ್ಮ ಸಹಾಯಕರ ಸಹಾಯದಿಂದ ಅತ್ಯಂತ ಉದ್ದ ಹಾಗೂ ಭಾರವಾದ ಬರ್ಮಿಸ್ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ ಈ ಹಾವು 19 ಅಡಿ ಉದ್ದ ಹಾಗೂ 56.6 ಕೆಜಿ ತೂಕವನ್ನು ಹೊಂದಿತ್ತು ಎನ್ನಲಾಗಿದೆ. 2020ರ ಅಕ್ಟೋಬರ್ ತಿಂಗಳಲ್ಲಿ ಫ್ಲೋರಿಡಾದಲ್ಲಿ 18 ಅಡಿ ಉದ್ದ ಹಾಗೂ 9 ಇಂಚಿನ ಬರ್ಮಿಸ್ ಹೆಬ್ಬಾವನ್ನು ಸೆರೆ ಹಿಡಿಯಲಾಗಿತ್ತು.
ಈ ವಿಡಿಯೋವನ್ನು 22 ವರ್ಷದ ವಿದ್ಯಾರ್ಥಿಯೊಬ್ಬರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಯಸ್ಕ ಜಿರಾಫೆಯಷ್ಟು ಉದ್ದರವಿರುವ ಈ ಹಾವಿನ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈಸ್ಟರ್ನ್ ಕೋಲಿಯರ್ ಕೌಂಟಿಯ ಬಿಗ್ ಸಪ್ರೈಸ್ ನ್ಯಾಷನಲ್ ಪ್ರಿಸರ್ವ್ನಲ್ಲಿ ಈ ಹೆಬ್ಬಾವನ್ನು ಹಿಡಿಯಲಾಗಿದೆ.
ವೃತ್ತಿಪರ ಹೆಬ್ಬಾವು ತಜ್ಞರಾಗಿರುವ ಕೆವ್ ಪಾವ್, ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿರುವ ನಿಮ್ಮನ್ನು ಅಭಿನಂದಿಸಲು ನನಗೆ ಖುಷಿಯಾಗುತ್ತಿದೆ ಎಂದಿದ್ದಾರೆ.