ಪಾಕ್ ಏಜೆಂಟ್ ಗೆ ರಹಸ್ಯ ಮಾಹಿತಿ ಸೋರಿಕೆ; ಡಿಆರ್‌ಡಿಒ ವಿಜ್ಞಾನಿ ಅರೆಸ್ಟ್: ಮೇ 29 ರವರೆಗೆ ಜೈಲಿಗೆ

ಪುಣೆ: ಪಾಕಿಸ್ತಾನಿ ಏಜೆಂಟ್‌ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಡಿಆರ್‌ಡಿಒ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರನ್ನು ಪುಣೆಯ ವಿಶೇಷ ನ್ಯಾಯಾಲಯ ಮಂಗಳವಾರ ಮೇ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪುಣೆಯಲ್ಲಿರುವ ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್(ಡಿಆರ್‌ಡಿಒ) ಲ್ಯಾಬ್‌ವೊಂದರಲ್ಲಿ ನಿರ್ದೇಶಕರಾಗಿದ್ದ ಕುರುಲ್ಕರ್ ಅವರನ್ನು ಮೇ 3 ರಂದು ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.

ವಿಚಾರಣೆಯ ಸಮಯದಲ್ಲಿ ಕುರುಲ್ಕರ್ ಅವರು ಅಧಿಕ ರಕ್ತದ ಸಕ್ಕರೆ ಮತ್ತು ಮನೆಯ ಆಹಾರದ ಸಮಸ್ಯೆಯಿರುವ ಕಾರಣ ಕೆಲವು ಔಷಧಿಗಳನ್ನು ಕೇಳಿದರು.

ನ್ಯಾಯಾಲಯವು ಅವರಿಗೆ ಔಷಧಿಗಳನ್ನು ನೀಡಲು ಅನುಮತಿ ನೀಡಿತು, ಆದರೆ ಅವರ ಮನೆಯಿಂದ ಆಹಾರವನ್ನು ತಲುಪಿಸಲು ಅವರ ಮನವಿಯನ್ನು ನಿರಾಕರಿಸಿತು.

ನ್ಯಾಯಾಲಯವು ಕುರುಲ್ಕರ್ ಅವರನ್ನು ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read