2025ನೇ ಸಾಲಿನ ಅಗಸ್ಟ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ. ಪರಿಹಾರವನ್ನು ಪಾವತಿಸುವ ಕುರಿತು ಜಂಟಿ ಸಮೀಕ್ಷೆಯನ್ನು ಜರುಗಿಸಲಾಗಿದೆ.
ಈ ಕುರಿತು ಸ್ವೀಕೃತವಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಸೆಪ್ಟಂಬರ್ 7, 2025 ರಂದು ಸಮೀಕ್ಷಾ ವರದಿಯನ್ನು ಅಂತಿಮಗೊಳಿಸಲಾಗಿದೆ ಮತ್ತು ತಾಲ್ಲೂಕುವಾರು ಈIಆ ಹೊಂದಿದ ರೈತರ ಬೆಳೆಹಾನಿ ಕ್ಷೇತ್ರದ ವಿವರಗಳನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ.
ಬೆಳೆಹಾನಿ ಸಮೀಕ್ಷೆಯ ಕ್ಷೇತ್ರ ವಿವರ :ಧಾರವಾಡ ತಾಲೂಕಿನಲ್ಲಿ 17,932 ರೈತರು ಮತ್ತು ಒಟ್ಟು 14,302.51 ಹೆಕ್ಟೇರ್ ಕ್ಷೇತ್ರ, ನವಲಗುಂದ ತಾಲೂಕಿನಲ್ಲಿ 25,890 ರೈತರು ಒಟ್ಟು 23,627.13 ಹೆಕ್ಟೇರ್ ಕ್ಷೇತ್ರ, ಹುಬ್ಬಳ್ಳಿ ತಾಲೂಕಿನಲ್ಲಿ 14,455 ರೈತರು ಒಟ್ಟು 15,858 ಹೆಕ್ಟೇರ್ ಕ್ಷೇತ್ರ, ಕುಂದಗೋಳ ತಾಲೂಕಿನಲ್ಲಿ 14,854 ರೈತರು ಒಟ್ಟು 12,847.34 ಹೆಕ್ಟೇರ್ ಕ್ಷೇತ್ರ, ಹುಬ್ಬಳ್ಳಿ ನಗರ 1,109 ರೈತರು ಒಟ್ಟು 881.91 ಹೆಕ್ಟೇರ್ ಕ್ಷೇತ್ರ, ಅಣ್ಣಿಗೇರಿ ತಾಲೂಕಿನಲ್ಲಿ 16,233 ರೈತರು ಒಟ್ಟು 14,931.99 ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಹಾನಿಯಾಗಿರುತ್ತದೆ.
ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ ವರದಿಯಂತೆ ಒಟ್ಡು ರೈತರ ಸಂಖ್ಯೆ 90,473 ಹಾಗೂ ಒಟ್ಟು 82,448.88 ಹೆಕ್ಟೆರ್ ಕ್ಷೇತ್ರಗಳ ಬೆಳೆ ಹಾನಿಯಾಗಿದ್ದು, ರೈತರ ಕರಡು ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಛೇರಿ, ಉಪವಿಭಾಧಿಕಾರಿಗಳ ಕಛೇರಿ, ಸಂಬಂಧಿಸಿದ ತಹಶೀಲ್ದಾರರ ಕಛೇರಿ, ಸಂಬಂಧಿಸಿದ ಗ್ರಾಮ ಪಂಚಾಯತ್ ಕಛೇರಿ, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಅಂತರಜಾಲದಲ್ಲಿ hಣಣಠಿs://ಜhಚಿಡಿತಿಚಿಜ.ಟಿiಛಿ.iಟಿ/eಟಿ/ಜoಛಿumeಟಿಣ ಈಗಾಗಲೇ ಪ್ರಕಟಿಸಲಾಗಿದೆ.
ಈ ಕುರಿತು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ ರೈತರ ಬೆಳೆ ಹಾನಿ ಕ್ಷೇತ್ರದಲ್ಲಿ ಮಾತ್ರ ಯಾವುದಾದರೂ ತಿದ್ದುಪಡಿ ಬಗ್ಗೆ, ಆಕ್ಷೇಪಣೆಗಳಿದ್ದಲ್ಲಿ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಸಂಬಂಧಿಸಿದ ತಾಲ್ಲೂಕಿನ ತಹಶೀಲ್ದಾರ, ಕೃಷಿ, ತೋಟಗಾರಿಕಾ ಕಛೇರಿಗಳಲ್ಲಿ ಹಾಗೂ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಕ್ಟೋಬರ್ 10, 2025 ರಂದು ಸಂಜೆ 5 ಗಂಟೆಯೊಳಗಾಗಿ ಸಲ್ಲಿಸುವಂತೆ ಕೋರಲಾಗಿದೆ.
ಸಂಜೆ 5 ಗಂಟೆವರೆಗೆ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಿ, ಯಾದಿಯನ್ನು ಅಂತಿಮಗೊಳಿಸಲಾಗುವುದು. ನಿಗದಿಪಡಿಸಿದ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇವಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.