BREAKING NEWS: ವರದಕ್ಷಿಣೆ ಕಿರುಕುಳ: ಡೆತ್ ನೋಟ್ ಬರೆಡಿಟ್ಟು ನವವಿವಾಹಿತೆ ಆತ್ಮಹತ್ಯೆ

ಕೋಲಾರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದ ಹೊರವಲಯದ ಸಹಕಾರ ನಗರದಲ್ಲಿ ನಡೆದಿದೆ.

ಮನಸಾ (24) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ವರ್ಷದ ಹಿಂದಷ್ಟೇ ಉಲ್ಲಾಸ್ ಗೌಡ ಎಂಬಾತನ ಜೊತೆ ಮಾನಸ ವಿವಾಹವಾಗಿತ್ತು. ಎರಡೂ ಕುಟುಂಬದವರು ನೊಡಿಯೇ ಮಾಡಿದ್ದ ವಿವಾಹ. ಆದರೆ ಮದುವೆ ಬಳಿಕ ಪತಿ ಉಲ್ಲಾಸ್ ಹಾಗೂ ಕುಟುಂಬದವರು ಮಾನಸಾಳಿಗೆ ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ಪತಿಯ ಮನೆಯವರ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟಿರುವ ಮಾನಸಾ ತವರಿಗೆ ಬಂದು ನೇಣಿಗೆ ಕೊರಳೊಡ್ಡಿದ್ದಾಳೆ. ವಿಶಯ ತಿಳಿಯುತ್ತಿದ್ದಂತೆ ಪತಿ ಉಲ್ಲಾಸ್ ಹಾಗೂ ಮನೆಯವರು ತಲೆಮರೆಸಿಕೊಂಡಿದ್ದಾರೆ. ಮನಸಾ ಶವದೊಂದಿಗೆ ಉಲ್ಲಾಸ್ ಮನೆ ಮುಂದೆ ಆಗಮಿಸಿರುವ ಪೋಷಕರು ಮನೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಉಲ್ಲಾಸ್ ಹಾಗೂ ಕುಟುಂಬದದವನ್ನು ಬಂಧಿಸಿ ಕ್ರಮ ಕೈಗೊಳ್ಳದ ಹೊರತು ಶವಸಂಸ್ಕಾರಕ್ಕೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read