ರಾಯಚೂರು: ಪತಿ ಮನೆಯವರ ಕಿರುಕುಳಕ್ಕೆ ಮನನೊಂದ ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿನಾಳ ಗ್ರಾಮದಲ್ಲಿ ನಡೆದಿದೆ.
ಅನುಪಮಾ (20) ಮೃತ ಗರ್ಭಿಣಿ. ಚಾಮರಾಜನಗರ ಮೂಲದ ಅನುಪಮಾ ಹಾಗೂ ರಾಯಚೂರಿನ ಬೂದಿನಾಳ ಗ್ರಾಮದ ನಾಗರಾಜ್ ಪ್ರೀತಿಸಿ ವಿವಾಹವಾಗಿದ್ದರು. ಇತ್ತೀಚೆಗೆ ನಾಗರಾಜ್ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಂತೆ. ಗಂಡನ ಮನೆಯವರ ಚುಚ್ಚು ಮಾತು, ಅವಮಾನ, ವರದಕ್ಷಿಣೆ ಕಿರುಕುಳಕ್ಕೆ ನೊಂದು ಗರ್ಭಿಣಿ ಅನುಪಮಾ ನೇಣಿಗೆ ಕೊರಳೊಡ್ಡಿದ್ದಾಳೆ.
ಅನುಪಮಾ ತಂದೆ ನಿಡಿದ ದೂರಿನ ಹಿನ್ನೆಲೆಯಲ್ಲಿ ಅನುಪಮಾ ಪತಿ ನಾಗರಾಜ್ ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಗರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.