BIG NEWS:‌ ಪೂನಂ ಪಾಂಡೆ ಸಾವಿನ ಸುತ್ತ ಅನುಮಾನದ ಹುತ್ತ; ಪ್ರಾಣಕ್ಕೆ ಮುಳುವಾಯ್ತಾ ಅತಿಯಾದ ಔಷಧ ಸೇವನೆ ?

ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಜಗತ್ತಿಗೆ ವಿದಾಯ ಹೇಳಿದ್ದಾರೆ. ನಟಿಯ ದಿಢೀರ್‌ ಸಾವನ್ನು ನಂಬಲಸಾಧ್ಯ ಎನ್ನುತ್ತಿದ್ದಾರೆ ಅಭಿಮಾನಿಗಳು. ಅದೆಷ್ಟೋ ಮಂದಿ ಪೂನಂ ಸಾವಿನ ಸುದ್ದಿ ಸುಳ್ಳಾಗಲಿ ಎಂದು ಹಾರೈಸುತ್ತಿದ್ದಾರೆ. ಈ ಮಧ್ಯೆ ಪೂನಂ ಪಾಂಡೆಯ ಹಳೆಯ ವಿಡಿಯೋಗಳು ನಿರಂತರವಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ. ನಟಿ ಸಾವನ್ನಪ್ಪಿದ್ದು ಕ್ಯಾನ್ಸರ್‌ನಿಂದಲ್ಲ, ಬೇರೆ ಕಾರಣದಿಂದ ಎಂಬ ಊಹಾಪೋಹಗಳು ಕೂಡ ವ್ಯಕ್ತವಾಗುತ್ತಿವೆ.

ಸಂಪರ್ಕಕ್ಕೆ ಸಿಗುತ್ತಿಲ್ಲ ಪೂನಂ ಪಾಂಡೆ ಕುಟುಂಬ !

ಪೂನಂ ಪಾಂಡೆ ಕುಟುಂಬಸ್ಥರು ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬದ ಯಾವುದೇ ಸದಸ್ಯರೊಂದಿಗೆ ಫೋನ್‌ ಸಂಭಾಷಣೆ ಮಾಧ್ಯಮಗಳಿಗೂ ಸಾಧ್ಯವಾಗಿಲ್ಲ. ಪೂನಂ ಅವರ ಸಹೋದರಿಯನ್ನೂ ಕರೆಸುವ ಪ್ರಯತ್ನ ನಡೆದಿದೆ ಎಂದು ಹೇಳಲಾಗ್ತಿದೆ. ಆದರೆ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಪೂನಂ ಪಾಂಡೆ ಸಾವಿಗೆ ಕಾರಣವೇನು ?

ಪೂನಂ ಪಾಂಡೆ ನಿಧನಕ್ಕೆ ಗರ್ಭಕಂಠದ ಕ್ಯಾನ್ಸರ್ ಕಾರಣವೆಂದು ಹೇಳಲಾಗಿದೆ. ಆದರೆ ಕೆಲವು ವರದಿಗಳ ಪ್ರಕಾರ ಪೂನಂ ಪಾಂಡೆ ಮೃತಪಟ್ಟಿರುವುದು ಗರ್ಭಕಂಠದ ಕ್ಯಾನ್ಸರ್‌ನಿಂದಲ್ಲ, ಬದಲಾಗಿ ಔಷಧಿಗಳ ಮಿತಿಮೀರಿದ ಸೇವನೆಯಿಂದ ಎಂದು ಹೇಳಲಾಗ್ತಾ ಇದೆ.

ಪೂನಂ ಪಾಂಡೆ ಅವರ ಟೀಂ ಸಾವಿನ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು. ಆದರೆ ಪೂನಂ ಸಾವಿನ ಬಗ್ಗೆ ನಟಿಯ ಸಹೋದರಿ ತಿಳಿಸಿದ್ದಾರೆ ಎಂದು ಚಿತ್ರತಂಡ ಹೇಳುತ್ತಿದೆ. ಆದರೆ ಇದರ ಹೊರತಾಗಿ ಕುಟುಂಬದವರು ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read