ರಾಷ್ಟ್ರರಾಜಧಾನಿಯಲ್ಲಿ ನಡೆದ ಡಬಲ್ ಮರ್ಡರ್ ಬೆಚ್ಚಿಬೀಳಿಸಿದೆ. ತಾಯಿ, ಮಗನ ಗಂಟಲು ಸೀಳಿ ಮನೆಕೆಲಸದ ಆಳು ಎಸ್ಕೇಪ್ ಆಗಿದ್ದು, ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ದೆಹಲಿಯ ಲಜಪತ್ ನಗರದಲ್ಲಿ ವಾಸಿಸುವ ಅಪಾರ್ಟ್ಮೆಂಟ್ ಒಳಗೆ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ಬೀಗ ಹಾಕಿದ ಅಪಾರ್ಟ್ಮೆಂಟ್ ಒಳಗೆ ಅವರ ಶವಗಳು ಪತ್ತೆಯಾಗಿವೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಕೊಲೆಯಾದವರನ್ನು ರುಚಿಕಾ (42) ಮತ್ತು ಆಕೆಯ ಮಗ ಕ್ರಿಶ್ (14) ಎಂದು ಗುರುತಿಸಲಾಗಿದೆ.
ರುಚಿಕಾ ಮಾಸ್ಟರ್ ಬೆಡ್ರೂಮ್ನಲ್ಲಿ ಪತ್ತೆಯಾಗಿದ್ದರೆ, ಅವರ ಮಗ ಕ್ರಿಶ್ ಪಕ್ಕದ ಸ್ನಾನಗೃಹದಲ್ಲಿ ಪತ್ತೆಯಾಗಿದ್ದಾನೆ. ಪ್ರಾಥಮಿಕ ಪರೀಕ್ಷೆಯಲ್ಲಿ ಹರಿತವಾದ ವಸ್ತುವಿನಿಂದ ಹೊಡೆದಿರುವುದು ಕಂಡುಬಂದಿದೆ.
ಪ್ರಕರಣದ ಪ್ರಮುಖ ಶಂಕಿತ ಎಂದು ಪರಿಗಣಿಸಲ್ಪಟ್ಟಿದ್ದ ಮನೆ ಕೆಲಸದವನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣದಲ್ಲಿ ರೈಲಿನಿಂದ ಬಂಧಿಸಿದ್ದಾರೆ. ಅವರು ಗಾರ್ಮೆಂಟ್ ಅಂಗಡಿಯಲ್ಲಿ ಚಾಲಕ ಮತ್ತು ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇಂದು ನಡೆದ ಪ್ರಾಥಮಿಕ ಪೊಲೀಸ್ ವಿಚಾರಣೆಯ ಸಮಯದಲ್ಲಿ, ಆರೋಪಿ ಮುಖೇಶ್ ಎಂದು ಗುರುತಿಸಲಾಗಿದ್ದು, ಕೋಪದ ಭರದಲ್ಲಿ 42 ವರ್ಷದ ತಾಯಿ ರುಚಿಕಾ ಮತ್ತು ಅವರ 14 ವರ್ಷದ ಮಗ ಕ್ರಿಶ್ ಅವರ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ರುಚಿಕಾ ತನ್ನ ಪತಿಯೊಂದಿಗೆ ಲಜ್ಪತ್ ನಗರ ಪ್ರದೇಶದಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರು ಮತ್ತು ಅವರ 14 ವರ್ಷದ ಮಗ ಕ್ರಿಶ್ 10 ನೇ ತರಗತಿಯಲ್ಲಿ ಓದುತ್ತಿದ್ದ.ಪೊಲೀಸ್ ಮೂಲಗಳ ಪ್ರಕಾರ, ಹತ್ಯೆಗೆ ಕೆಲವೇ ನಿಮಿಷಗಳ ಮೊದಲು ರುಚಿಕಾ ತನ್ನನ್ನು ಬೈದಿದ್ದಳು ಎಂದು ಮುಖೇಶ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಅವಳು ( ಮನೆ ಮಾಲೀಕಿ) ನನ್ನನ್ನು ಗದರಿಸಿದಳು, ಮತ್ತು ನಾನು ನಿಯಂತ್ರಣ ಕಳೆದುಕೊಂಡೆ” ಎಂದು ಅವನು ಹೇಳಿದರು. ಬಿಹಾರದ ಹಾಜಿಪುರದ ಖಾಯಂ ನಿವಾಸಿ, ಪ್ರಸ್ತುತ ಅಮರ್ ಕಾಲೋನಿಯಲ್ಲಿ ವಾಸಿಸುತ್ತಿರುವ 24 ವರ್ಷದ ಮುಖೇಶ್ ನನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ನಡೆದ ಹತ್ಯೆಗಳ ನಂತರ ಮುಖೇಶ್ ಪರಾರಿಯಾಗಿದ್ದ.
