BIG NEWS: ಕೇವಲ 5 ವರ್ಷಗಳಲ್ಲಿ ಡಬಲ್ ಆಯ್ತು GST ಸಂಗ್ರಹ…! ದಾಖಲೆಯ 22.08 ಲಕ್ಷ ಕೋಟಿ ರೂ.ಗೆ ಏರಿಕೆ

ನವದೆಹಲಿ: ಕೇವಲ 5 ವರ್ಷಗಳಲ್ಲಿ ಜಿ.ಎಸ್.ಟಿ. ದ್ವಿಗುಣಗೊಂಡಿದೆ. ಒಟ್ಟು ಜಿಎಸ್‌ಟಿ ಸಂಗ್ರಹವು 2025ನೇ ಹಣಕಾಸು ವರ್ಷದಲ್ಲಿ ದಾಖಲೆಯ ಗರಿಷ್ಠ 22.08 ಲಕ್ಷ ಕೋಟಿ ರೂ.ಗೆ ತಲುಪಿದೆ. ಸರಾಸರಿ ಮಾಸಿಕ ಸಂಖ್ಯೆ 1.84 ಲಕ್ಷ ಕೋಟಿ ರೂ. ಗೆ ತಲುಪಿದೆ.

ಹೌದು, 5 ವರ್ಷಗಳಲ್ಲಿ ಜಿಎಸ್‌ಟಿ ಸಂಗ್ರಹವು ದ್ವಿಗುಣಗೊಂಡಿದೆ. ಸೋಮವಾರ ಬಿಡುಗಡೆಯಾದ ಸರ್ಕಾರಿ ದತ್ತಾಂಶವು 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಸಂಗ್ರಹವು ದಾಖಲೆಯ ಗರಿಷ್ಠ 22.08 ಲಕ್ಷ ಕೋಟಿ ರೂ.ತಲುಪಿದೆ ಎಂದು ಬಹಿರಂಗಪಡಿಸಿದೆ. ಇದು 2021ನೇ ಹಣಕಾಸು ವರ್ಷದಲ್ಲಿ 11.37 ಲಕ್ಷ ಕೋಟಿ ರೂ.ಗಳಿಂದ ಗಮನಾರ್ಹ ಏರಿಕೆ ಕಂಡಿದ್ದು, ಐದು ವರ್ಷಗಳಲ್ಲಿ ಪರಿಣಾಮಕಾರಿಯಾಗಿ ದ್ವಿಗುಣಗೊಂಡಿದೆ.

ಮಾಸಿಕ ಸಂಗ್ರಹವು ಸರಾಸರಿ 1.84 ಲಕ್ಷ ಕೋಟಿ ರೂ.ಗೆ ಏರಿದೆ. ಇದು 2024ನೇ ಹಣಕಾಸು ವರ್ಷದಲ್ಲಿ 1.68 ಲಕ್ಷ ಕೋಟಿ ರೂ. ಇದ್ದು, 2022ನೇ ಹಣಕಾಸು ವರ್ಷದಲ್ಲಿ 1.51 ಲಕ್ಷ ಕೋಟಿ ರೂ.ಗಳಿಂದ ಗಮನಾರ್ಹ ಏರಿಕೆ ಕಂಡಿದೆ.

ಜಿಎಸ್‌ಟಿ ವ್ಯವಸ್ಥೆಯು ತನ್ನ ತೆರಿಗೆದಾರರ ನೆಲೆಯಲ್ಲಿ ಗಣನೀಯ ವಿಸ್ತರಣೆಯನ್ನು ಕಂಡಿದೆ, ನೋಂದಾಯಿತ ತೆರಿಗೆದಾರರು 2017ರಲ್ಲಿ 65 ಲಕ್ಷದಿಂದ ಎಂಟು ವರ್ಷಗಳ ಅವಧಿಯಲ್ಲಿ 1.51 ಕೋಟಿಗೂ ಹೆಚ್ಚಾಗಿದ್ದಾರೆ.

2024-25ನೇ ಆರ್ಥಿಕ ವರ್ಷದಲ್ಲಿ ಅಭೂತಪೂರ್ವವಾಗಿ ಒಟ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 22.08 ಲಕ್ಷ ಕೋಟಿ ರೂ.ಗಳಾಗಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 9.4 ರಷ್ಟು ಬೆಳವಣಿಗೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read