ಅಪ್ಪಿತಪ್ಪಿಯೂ ಬೇರೆಯವರ ಮಂಗಳಸೂತ್ರ ಧರಿಸ್ಬೇಡಿ

ಹಿಂದೂ ಧರ್ಮದಲ್ಲಿ ಮಹಿಳೆಯರ ಮಂಗಳಸೂತ್ರಕ್ಕೆ ಮಹತ್ವದ ಸ್ಥಾನವಿದೆ. ಮಂಗಳ ಸೂತ್ರವನ್ನು ಸೌಭಾಗ್ಯದ ಸಂಕೇತವೆಂದೇ ಭಾವಿಸಲಾಗುತ್ತದೆ. ವಿವಾಹಿತ ಮಹಿಳೆ ಮೇಕಪ್‌ ನಲ್ಲಿ ಮಂಗಳಸೂತ್ರವಿಲ್ಲವೆಂದ್ರೆ ಅದು ಅಪೂರ್ಣವೆನ್ನಿಸಿಕೊಳ್ಳುತ್ತದೆ. ವಿವಾಹಿತ ಮಹಿಳೆಯರ ಗುರುತು ಮಂಗಳಸೂತ್ರ. ಮದುವೆ ಸಮಯದಲ್ಲಿ ಪತಿ ಹಾಕುವ ಒಡವೆ ಇದು. ಮಂಗಳ ಸೂತ್ರವನ್ನು ನಿಮಗೆ ತಿಳಿದಿರುವಂತೆ ಕರಿಮಣಿ ಹಾಗೂ ಬಂಗಾರದಿಂದ ಮಾಡಿರಲಾಗುತ್ತದೆ. ಇದನ್ನು ಶಿವ ಮತ್ತು ಪಾರ್ವತಿಯ ಬಂಧವೆಂದು ನಂಬಲಾಗಿದೆ.

ಮಂಗಳ ಸೂತ್ರ ಮಹಿಳೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಗೆ ವಿಶೇಷ ಕಳೆ ತಂದುಕೊಡುತ್ತದೆ. ಈಗಿನ ದಿನಗಳಲ್ಲಿ ಮಂಗಳ ಸೂತ್ರ ಧರಿಸುವ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಇದನ್ನು ಶಾಸ್ತ್ರಗಳು ತಪ್ಪು ಎನ್ನುತ್ತವೆ. ಇದಲ್ಲದೆ ಮಂಗಳ ಸೂತ್ರವನ್ನು ಬದಲಿಸಿಕೊಳ್ಳಬಾರದು ಎಂದೂ ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ಜನರು ತಮ್ಮ ವಸ್ತುಗಳನ್ನು ಬದಲಿಸಿಕೊಳ್ತಾರೆ. ಬೇರೆಯವರ ಬಟ್ಟೆ ಧರಿಸುವ, ಆಭರಣ ಧರಿಸುವ ಅಭ್ಯಾಸ ಅನೇಕರಿಗಿದೆ. ನೀವೂ ಅವರಲ್ಲಿ ಒಬ್ಬರಾಗಿದ್ದು, ಬೇರೆಯವರ ಮಂಗಳ ಸೂತ್ರವನ್ನು ಧರಿಸುತ್ತಿದ್ದರೆ ಇಂದೇ ಈ ಅಭ್ಯಾಸ ಬಿಡಿ. ಮಹಿಳೆಯರು ಬೇರೆಯವರ ಮಂಗಳಸೂತ್ರ ಧರಿಸಿದ್ರೆ ಅಥವಾ ಬೇರೆಯವರಿಗೆ ಮಂಗಳಸೂತ್ರ ನೀಡಿದ್ರೆ ಅದು ಒಳ್ಳೆಯದಲ್ಲ.  ಬೇರೆಯವರ ಮಂಗಳಸೂತ್ರ ಧರಿಸಿದ್ರೆ ಪತಿಯ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಅನೇಕ ತೊಂದರೆಗಳನ್ನು ಎದುರಿಸುತ್ತಾನೆ. ಆರೋಗ್ಯ ಸಮಸ್ಯೆ ಪತಿಯನ್ನು ಕಾಡುತ್ತದೆ. ಬೇರೆಯವರ ಮಂಗಳಸೂತ್ರ ಧರಿಸೋದು ಅಶುಭ. ಒಂದ್ವೇಳೆ ಮಂಗಳಸೂತ್ರ ಕಳೆದು ಹೋದ್ರೆ ಅರಿಶಿನ ದಾರವನ್ನು ಧರಿಸಬೇಕೆಂದು ಹೇಳಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read