ಎಚ್ಚರ : ಮನೆಯಲ್ಲೇ ಕುಳಿತು ಇಂತಹ ವಿಡಿಯೋ ನೋಡಿದ್ರೆ ಜೈಲು ಗ್ಯಾರಂಟಿ !

ಭಾರತದಲ್ಲಿ ಮಕ್ಕಳ ಅಶ್ಲೀಲತೆಯನ್ನು ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು ಅಥವಾ ತಯಾರಿಸುವುದು ಗಂಭೀರ ಅಪರಾಧ. ಇದಕ್ಕೆ ಕಠಿಣ ಶಿಕ್ಷೆಯೂ ಇದೆ. ನೀವು ನಿಮ್ಮ ಸ್ವಂತ ಮನೆಯಲ್ಲಿ ಕುಳಿತುಕೊಂಡು ಇಂತಹ ವಿಷಯಗಳನ್ನು ಹುಡುಕಿದರೂ ಸಹ, ಪೊಲೀಸರು ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಸಲಾಗಿದೆ.

ಮೊಬೈಲ್ ಫೋನ್‌ಗಳು ಜಗತ್ತಿನ ಯಾವುದೇ ಮಾಹಿತಿಯನ್ನು ಬೆರಳ ತುದಿಯಲ್ಲಿ ತಂದುಕೊಟ್ಟಿವೆ. ಆದರೆ, ಇದರ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಯುವ ಪೀಳಿಗೆ ಅಶ್ಲೀಲತೆಗೆ ಹೆಚ್ಚು ಆಕರ್ಷಿತವಾಗುತ್ತಿದ್ದು, ಇದರಿಂದ ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯ ಅಶ್ಲೀಲತೆ ವೀಕ್ಷಣೆ ಭಾರತದಲ್ಲಿ ಅಪರಾಧವಲ್ಲದಿದ್ದರೂ, ತಪ್ಪಾಗಿಯೂ ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ವಿಡಿಯೊಗಳನ್ನು ನೋಡಿದರೆ ನೀವು ತೊಂದರೆಗೆ ಸಿಲುಕಬಹುದು. ಮಕ್ಕಳ ಅಶ್ಲೀಲತೆಯನ್ನು ವೀಕ್ಷಿಸುವುದು, ಡೌನ್‌ಲೋಡ್ ಮಾಡುವುದು ಅಥವಾ ಹಂಚಿಕೆ ಮಾಡುವುದು ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 67 ರ ಅಡಿಯಲ್ಲಿ, ಈ ಕೃತ್ಯಕ್ಕೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ.

ಸುಪ್ರೀಂ ಕೋರ್ಟ್ ಸಹ ಈ ಬಗ್ಗೆ ಮಹತ್ವದ ತೀರ್ಪನ್ನು ನೀಡಿದ್ದು, ಒಬ್ಬ ವ್ಯಕ್ತಿಯು ವೈಯಕ್ತಿಕವಾಗಿ ನೋಡಲು ಅಥವಾ ಡೌನ್‌ಲೋಡ್ ಮಾಡಲು ಪ್ರಯತ್ನಿಸಿದರೂ ಅದು ಅಪರಾಧದ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ, ‘ಮಕ್ಕಳ ಅಶ್ಲೀಲತೆ’ ಎಂಬ ಪದದ ಬಳಕೆಯನ್ನು ವಿರೋಧಿಸಿ, ಅದರ ಬದಲು ‘ಮಕ್ಕಳ ಲೈಂಗಿಕ ಶೋಷಣೆ ಮತ್ತು ದುರುಪಯೋಗದ ವಸ್ತು’ ಎಂಬ ಪದವನ್ನು ಬಳಸುವಂತೆ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.

ಹಾಗಾಗಿ, ನೀವೂ ಸಹ ಅಜಾಗರೂಕತೆಯಿಂದ ಇಂತಹ ವಿಡಿಯೊಗಳನ್ನು ನೋಡಿದರೆ ಕಾನೂನಿನ ಬಲೆಗೆ ಬೀಳುವ ಸಾಧ್ಯತೆ ಇದೆ. ಎಚ್ಚರಿಕೆಯಿಂದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read