ಶುಂಠಿ ಸಿಪ್ಪೆಯನ್ನು ಎಸೆಯಬೇಡಿ ಈ ಕೆಲಸಕ್ಕೆ ಬಳಕೆಯಾಗುತ್ತೆ ನೋಡಿ

ಶುಂಠಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಅದರಲ್ಲೂ ಕೂಡ ಔಷಧೀಯ ಅಂಶಗಳು ಅಡಗಿವೆ. ಹಾಗಾಗಿ ಶುಂಠಿ ಸಿಪ್ಪೆಯನ್ನು ಎಸೆಯುವ ಬದಲು ಈ ಸಮಸ್ಯೆಗಳ ನಿವಾರಣೆಗೆ ಬಳಸಿಕೊಳ್ಳಿ.

*ಇದನ್ನು ಕೆಮ್ಮು ನಿವಾರಣೆಗೆ ಬಳಸಬಹುದು. ಶುಂಠಿ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

*ಇದರಲ್ಲಿ ರಂಜಕ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದನ್ನು ಎಸೆಯುವ ಬದಲು ಗಿಡಗಳಿಗೆ ಗೊಬ್ಬರವಾಗಿ ಬಳಸಿ. ಇದರಿಂದ ಚೆನ್ನಾಗಿ ಹೂ ಬಿಡುತ್ತದೆ.

*ಕೋಸುಗಡ್ಡೆ, ಹೂಕೋಸು, ಮೂಲಂಗಿ ಮುಂತಾದ ತರಕಾರಿಗಳನ್ನು ಬೇಯಿಸುವಾಗ ತುಂಬಾ ವಾಸನೆ ಬರುತ್ತದೆ. ಈ ವಾಸನೆಯನ್ನು ನಿವಾರಿಸಿ ಅಡುಗೆ ಪರಿಮಳವಾಗಿಸಲು ಶುಂಠಿ ಸಿಪ್ಪೆಯನ್ನು ಸೇರಿಸಿ ಬೇಯಿಸಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read