‘ನನ್ನ ತಾಳ್ಮೆ ಪರೀಕ್ಷಿಸಬೇಡ , ಎಲ್ಲೇ ಇದ್ರೂ ಶರಣಾಗು’ : ಪ್ರಜ್ವಲ್ ಗೆ ಮಾಜಿ ಪ್ರಧಾನಿ ‘HDD’ ಖಡಕ್ ವಾರ್ನಿಂಗ್

ಬೆಂಗಳೂರು : ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಎಲ್ಲೇ ಇದ್ರೂ ಶರಣಾಗು ಎಂದು ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ನಲ್ಲಿ ಬಹಿರಂಗ ಪತ್ರ ಹೊರಡಿಸಿರುವ ದೇವೇಗೌಡರು ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಎಲ್ಲೇ ಇದ್ರೂ ಪೊಲೀಸರಿಗೆ ಶರಣಾಗು. ಕಾನೂನು ಪ್ರಕ್ರಿಯೆಗೆ ಹಾಜರಾಗು..ಎಲ್ಲಿದ್ದರೂ ಸ್ವದೇಶಕ್ಕೆ ವಾಪಸ್ ಆಗಬೇಕು…ಈ ವಿಚಾರವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತಿದ್ದೇನೆ.

ಎಲ್ಲವನ್ನು ತೀರ್ಮಾನಿಸಲು ಕಾನೂನು ಇದೆ. ನಾನಾಗಲಿ ನನ್ನ ಕುಟುಂಬವಾಗಲಿ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಬಾರದೇ ಇದ್ರೆ ಕುಟುಂಬದ ಕೋಪದ ಕಣ್ಣಿಗೆ ಗುರಿಯಾಗುತ್ತೀಯಾ..? ಕುಟುಂಬದ ಕಣ್ಣಿಗೆ ನೀನು ಏಕಾಂಗಿಯಾಗಿರಬೇಕಾದಿತು ಎಂದು ದೇವೇಗೌಡರು ಖಡಕ್ ಎಚ್ಚರಿಕೆ ನೀಡಿದ್ದಾರೆ.

https://twitter.com/H_D_Devegowda/status/1793590773587267665

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read