ಹಣ ಬೇಗ ಖಾಲಿಯಾಗ್ಬಾರದು ಅಂದ್ರೆ ಮನೆಯನ್ನೊಮ್ಮೆ ಚೆಕ್ ಮಾಡಿ

ಗಳಿಸಿದ ಹಣ ಕೈನಲ್ಲಿ ನಿಲ್ಲುತ್ತಿಲ್ಲ. ಇದು ಅನೇಕರ ಸಮಸ್ಯೆ. ಕಷ್ಟಪಟ್ಟು ಹಣ ಸಂಪಾದನೆ ಮಾಡೋದು ನಿಜ. ಆದ್ರೆ ವಾರದೊಳಗೆ ಎಲ್ಲ ಖಾಲಿಯಾಗಿ ಬರಿಗೈನಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ನಿಮ್ಮ ಈ ಪರಿಸ್ಥಿತಿಗೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಿ.

ಮನೆ, ಹಣ, ಆರೋಗ್ಯ ಎಲ್ಲವೂ ವಾಸ್ತುಶಾಸ್ತ್ರದ ಜೊತೆ ಸಂಬಂಧ ಹೊಂದಿದೆ. ನೀವು ಮನೆಯಲ್ಲಿ ಮಾಡುವ ಅನೇಕ ಕೆಲಸಗಳು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ವಾಸ್ತು ನಿಯಮಗಳನ್ನು ಪಾಲಿಸುತ್ತ ನಡೆದಲ್ಲಿ ಯಾವುದೇ ಸಮಸ್ಯೆ ನಿಮ್ಮನ್ನು ಬಾಧಿಸೋದಿಲ್ಲ.

ನಿಮ್ಮ ಕೈನಲ್ಲಿ ಹಣ ಸದಾ ಇರಬೇಕು ಅಂದರೆ ನೀವು ಮನೆಯಲ್ಲಿರುವ ಕೆಲ ವಸ್ತುಗಳ ಬಗ್ಗೆ ಗಮನ ಹರಿಸಿ.

 ವಾರ್ಡ್ರೋಬ್ : ವಾಸ್ತು ಪ್ರಕಾರ, ಮನೆಯ ವಾಯುವ್ಯ ಭಾಗ ಯಾವಾಗಲೂ ಎತ್ತರವಾಗಿರಬೇಕು. ಈಶಾನ್ಯ ದಿಕ್ಕಿನಲ್ಲಿ ಇಳಿಜಾರು ಇರಬೇಕು. ಮನೆಯ ವಾರ್ಡ್ರೋಬ್ ಯಾವಾಗಲೂ ದಕ್ಷಿಣ ಗೋಡೆಗೆ ಇರಬೇಕು. ಬೀರುವಿನ ಮುಖ ಉತ್ತರಕ್ಕೆ ಇರಬೇಕು.

ಅಕ್ವೇರಿಯಂ : ದೇವಾನುದೇವತೆಗಳು ಈಶಾನ್ಯ ಮೂಲೆಯಲ್ಲಿ ನೆಲೆಸಿದ್ದಾರೆಂಬ ನಂಬಿಕೆ ಇದೆ. ಹಾಗಾಗಿ ಈ ಜಾಗದಲ್ಲಿ ನೀರಿಗೆ ಸಂಬಂಧಿತ ವಸ್ತು ಇಡಬೇಕು. ಆರ್ಥಿಕ ಲಾಭವನ್ನು ಪಡೆಯಲು ನೀವು ಮನೆಯ ಈಶಾನ್ಯ ಮೂಲೆಯಲ್ಲಿ ಅಕ್ವೇರಿಯಂ ಇಡಬೇಕು.

ಅಡುಗೆ ಮನೆಯಲ್ಲಿ ಈ ತಪ್ಪು ಮಾಡಬೇಡಿ : ರಾತ್ರಿ ಊಟದ ನಂತ್ರ ಅನೇಕರ ಮನೆಯ ಸಿಂಕ್‌ ನಲ್ಲಿ ಪಾತ್ರೆಗಳಿರುತ್ತವೆ. ಇದು ನಿಮ್ಮ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಸ್ವಚ್ಛತೆಗೆ ಆಧ್ಯತೆ ನೀಡುವ ಲಕ್ಷ್ಮಿ ಈ ಕೆಲಸದಿಂದ ಮುನಿಸಿಕೊಳ್ಳುತ್ತಾಳೆ. ಹಾಗಾಗಿ ನೀವು ರಾತ್ರಿ ಊಟವಾದ ನಂತ್ರ ಸಿಂಕ್‌ ನಲ್ಲಿ ಕೊಳಕು ಪಾತ್ರೆ ಇರದಂತೆ ನೋಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read