ಬೇಸಿಗೆಯಲ್ಲಿ ಈ ಮಸಾಲೆಗಳ ಅತಿಯಾದ ಸೇವನೆ ಬೇಡ…! 

ತರಕಾರಿಗಳ ರುಚಿಯನ್ನು ಹೆಚ್ಚಿಸುವಲ್ಲಿ ಮಸಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಎಲ್ಲಾ ಋತುಗಳಲ್ಲೂ ಕೆಲವೊಂದು ಮಸಾಲೆಗಳನ್ನು ಸೇವಿಸುವುದು ಸೂಕ್ತವಲ್ಲ. ಕೆಲವೊಂದು ಮಸಾಲೆಗಳನ್ನು ಬೇಸಿಗೆಯಲ್ಲಿ ತಿನ್ನಬಾರದು.

ಇವುಗಳನ್ನು ಬಳಸಲೇಬೇಕೆಂದಿದ್ದರೆ ಈ ಮಸಾಲೆಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ಹಾನಿಯಾಗುವುದಿಲ್ಲ. ಅತಿಯಾಗಿ ಮಸಾಲೆ ಸೇವಿಸಿದ್ರೆ ಯಾವೆಲ್ಲಾ ಸಮಸ್ಯೆಗಳಾಗುತ್ತವೆ ಅನ್ನೋದನ್ನು ನೋಡೋಣ.

ಅರಿಶಿನ: ಅರಿಶಿನವು ನಿಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು. ಆದರೆ ನೀವು ಅದನ್ನು ಅತಿಯಾದ ಪ್ರಮಾಣದಲ್ಲಿ ಬಳಸಿದರೆ ಸಮಸ್ಯೆಯಾಗಬಹುದು. ವಿಶೇಷವಾಗಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅರಿಶಿನವನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು. ಅತಿಯಾಗಿ ಸೇವನೆ ಮಾಡಿದ್ರೆ ಹೆಚ್ಚು ರಕ್ತಸ್ರಾವವಾಗಬಹುದು.

ತುಳಸಿ: ಬೇಸಿಗೆಯಲ್ಲಿ ತುಳಸಿಯನ್ನೂ ಕಡಿಮೆ ಬಳಸಬೇಕು. ಇದನ್ನು ಅತಿಯಾಗಿ ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದು ಮಹಿಳೆಯರಲ್ಲಿ ಫಲವತ್ತತೆಯ ಮೇಲೂ ಪರಿಣಾಮ ಬೀರಬಹುದು.

ದಾಲ್ಚಿನಿ: ದಾಲ್ಚಿನ್ನಿ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಆದರೆ ಅತಿಯಾಗಿ  ಬಳಕೆ ಮಾಡಿದ್ರೆ ಬಾಯಿಯಲ್ಲಿ ಗುಳ್ಳೆಗಳನ್ನು ಉಂಟುಮಾಡಬಹುದು. ದಾಲ್ಚಿನಿಯನ್ನು ಹೆಚ್ಹೆಚ್ಚು ಸೇವನೆ ಮಾಡಿದ್ರೆ ರಕ್ತದೊತ್ತಡ ಏರುಪೇರಾಗುವ ಸಾಧ್ಯತೆಯೂ ಇರುತ್ತದೆ.

ಕಾಳುಮೆಣಸು: ಕಾಳುಮೆಣಸನ್ನು ಅಡುಗೆಗೆ ಬಳಸುತ್ತೇವೆ. ಇದು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಆದ್ರೆ ನಿಮಗೇನಾದ್ರೂ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದ್ದರೆ ಕಾಳು ಮೆಣಸನ್ನು ಸೇವನೆ ಮಾಡದೇ ಇರುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read