ಮಲಗುವ ಮುನ್ನ ಅಪ್ಪಿತಪ್ಪಿಯೂ ʼಸಂಗಾತಿʼ ಜೊತೆ ಮಾಡಬೇಡಿ ಈ ತಪ್ಪು

ಪತ್ನಿ ಇರಲಿ ಅಥವಾ ಗರ್ಲ್ ಫ್ರೆಂಡ್ ಪ್ರತಿಯೊಂದು ಸಂಬಂಧದಲ್ಲೂ ಕೆಲವೊಂದು ವಿಷಯಗಳಿಗೆ ವಿಶೇಷ ಗಮನ ನೀಡಬೇಕಾಗುತ್ತದೆ. ನಿಮ್ಮ ಒಂದು ಸಣ್ಣ ತಪ್ಪು ಇಡೀ ಸಂಬಂಧಕ್ಕೆ ಕಪ್ಪು ಚುಕ್ಕೆಯಾಗುವ ಸಾಧ್ಯತೆ ಇರುತ್ತದೆ. ಕೆಲಸದ ಒತ್ತಡದಿಂದಾಗಿ ಇಡೀ ದಿನ ಬ್ಯುಸಿಯಾಗಿರುವ ಜನರಿಗೆ ರಾತ್ರಿ ಅಲ್ಪಸ್ವಲ್ಪ ಸಮಯ ಸಿಗುತ್ತೆ. ಈ ಸಮಯದಲ್ಲಿ ಪುರುಷರು ಅಪ್ಪಿತಪ್ಪಿಯೂ ಕೆಲವೊಂದು ತಪ್ಪುಗಳನ್ನು ಮಾಡಬಾರದು.

ರಾತ್ರಿ ಮಲಗುವ ಮೊದಲು ಲ್ಯಾಪ್ ಟಾಪ್ ಅಥವಾ ಮೊಬೈಲ್ ಹಿಡಿದುಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ನಿದ್ರೆ ಬರುವವರೆಗೂ ಮೊಬೈಲ್ ನಲ್ಲಿರ್ತಾರೆ ಅನೇಕರು. ಈ ತಪ್ಪನ್ನು ಇಷ್ಟು ದಿನ ನೀವೂ ಮಾಡ್ತಾ ಇದ್ದಲ್ಲಿ ಇಂದೇ ಇದನ್ನು ಬಿಡಿ. ಸಾಧ್ಯವಾದಷ್ಟು ರಾತ್ರಿ ಸಮಯವನ್ನು ಪತ್ನಿ ಅಥವಾ ಸಂಗಾತಿ ಜತೆ ಕಳೆಯಿರಿ. ನಿಮ್ಮಿಬ್ಬರ ಮಧ್ಯೆ ಇರುವ ಅಂತರ ಕಡಿಮೆ ಮಾಡಿ ಪ್ರೀತಿ ಹೆಚ್ಚಾಗಲು ಇದು ಕಾರಣವಾಗುತ್ತದೆ.

ಬೆಡ್ ರೂಂನಲ್ಲಿ ನಿಮ್ಮ ಕಚೇರಿಯ ಅಥವಾ ಸಂಬಂಧಿಕರ ವಿಚಾರ ಪ್ರಸ್ತಾಪ ಮಾಡೋದು ಬೇಡ. ಇದು ನಿಮ್ಮ ಸಂಗಾತಿಗೆ ಕಿರಿಕಿರಿಯುಂಟು ಮಾಡಬಹುದು. ಈ ಅಮೂಲ್ಯ ಸಮಯವನ್ನು ಪರಸ್ಪರ ಪ್ರೀತಿಯ ಮಾತಿನಲ್ಲಿ ಕಳೆಯಿರಿ.

ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ಸಂಗಾತಿ ಇಡೀ ದಿನ ಮಾಡಿದ ತಪ್ಪಿನ ಬಗ್ಗೆ ಚರ್ಚೆ ಮಾಡಬೇಡಿ. ಇದು ಸಂಗಾತಿಯ ಬೇಸರಕ್ಕೆ ಕಾರಣವಾಗಬಹುದು. ಜೊತೆಗೆ ನಿಮ್ಮ ಮೇಲೆ ಸಂಗಾತಿ ಮುನಿಸಿಕೊಂಡು ಗಲಾಟೆ ಮಾಡೋದ್ರಿಂದ ಇಡೀ ರಾತ್ರಿ ಹಾಳಾಗಬಹುದು.

ರಾತ್ರಿ ಏನೂ ಹೇಳದೆ ಹಾಸಿಗೆಗೆ ತಲೆಕೊಟ್ಟ ತಕ್ಷಣ ಸಂಗಾತಿ ನಿದ್ರೆ ಮಾಡ್ತಾನೆ ಎಂಬ ದೂರು ಅನೇಕ ಹುಡುಗಿಯರದ್ದು. ರಾತ್ರಿ ಮಲಗುವ ಮೊದಲು ಗುಡ್ ನೈಟ್ ಕಿಸ್ ಕೊಡುವುದನ್ನು ಮರೆಯಬೇಡಿ.

ರಾತ್ರಿ ಸಂಗಾತಿಗೆ ಬೆನ್ನು ಹಾಕಿ ಮಲಗೋದು ಬಹುತೇಕ ಹುಡುಗಿಯರಿಗೆ ಇಷ್ಟವಾಗೋದಿಲ್ಲ. ಸಂಗಾತಿ ತಬ್ಬಿ ಮಲಗಬೇಕೆಂಬುದು ಅವರ ಆಸೆ. ಇದನ್ನು ಪುರುಷನಾದವನು ನೆನಪಿಟ್ಟುಕೊಳ್ಳುವ ಅವಶ್ಯಕತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read