ಗರ್ಭ ಧರಿಸಲು ಬಯಸುವವರು ಈ ಆಹಾರ ಸೇವಿಸಲು ಮರೆಯಬೇಡಿ….!

ಎಲ್ಲಾ ತಾಯಂದಿರು ಆರೋಗ್ಯವಂತ ಮಗುವನ್ನು ಪಡೆಯಬೇಕೆಂದು ಬಯಸುತ್ತಾರೆ. ಹಾಗಾಗಿ ಗರ್ಭಧರಿಸಲು ನಿರ್ಧರಿಸುವವರು ಈ ಆಹಾರಗಳನ್ನು ಸೇವಿಸಿ. ಇದು ಗರ್ಭಧಾರಣೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಮತ್ತು ಆರೋಗ್ಯವಂತ ಮಗುವನ್ನು ಪಡೆಯಲು ಸಹಕರಿಸುತ್ತದೆ.

*ಒಮೆಗಾ 3 : ಇದರಲ್ಲಿ ಕೊಬ್ಬಿನಾಮ್ಲ ಸಮೃದ್ಧವಾಗಿರುತ್ತದೆ. ಇದು ಅಂಡೋತ್ಪತ್ತಿಗೆ ಪ್ರಚೋದಿಸುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ರಕ್ತಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

*ಅಯೋಡಿನ್ : ಇದು ಗರ್ಭಧಾರಣೆಗೆ ಸಮಸ್ಯೆಯನ್ನುಂಟು ಮಾಡುವ ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಡೈರಿ ಉತ್ಪನ್ನಗಳು ಮತ್ತು ಅಯೋಡಿಕರಿಸಿದ ಉಪ್ಪಿನಲ್ಲಿ ಕಂಡುಬರುತ್ತದೆ.

*ಫೈಬರ್ : ಇದು ಫಲವತ್ತತೆಯನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹಣ್ಣುಗಳು, ಧಾನ್ಯಗಳು, ತರಕಾರಿಗಳಲ್ಲಿ ಅಧಿಕವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read