ನಟನ ಕಾರಿಗೆ ದಂಡ ವಿಧಿಸಿದ್ದ ವಿಷಯವನ್ನು ವಿಶಿಷ್ಟ ರೀತಿಯಲ್ಲಿ ಹಂಚಿಕೊಂಡ ಮುಂಬೈ ಪೊಲೀಸ್

ನಟ ಕಾರ್ತಿಕ್ ಆರ್ಯನ್ ಗೆ ಮುಂಬೈ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕಾರ್ತಿಕ್ ಆರ್ಯನ್ ಶುಕ್ರವಾರ ತಮ್ಮ ಚಿತ್ರ ʼಶೆಹಜಾದಾʼ ಬಿಡುಗಡೆಗೂ ಮುನ್ನ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಅವರು ಸಂಚಾರಿ ನಿಯಮ ಉಲ್ಲಂಘಿಸಿ, ತಮ್ಮ ಕಾರನ್ನು ರಸ್ತೆಯ ಮೇಲೆ ನಿಲ್ಲಿಸಿದ್ದರಿಂದ ಇತರರಿಗೆ ತೊಂದರೆಯಾಗಿತ್ತು. ಇದಕ್ಕಾಗಿ ನಟನಿಗೆ ಪೊಲೀಸರು ದಂಡ ಹಾಕಿದ್ದಾರೆ.

ಈ ಬಗ್ಗೆ ಹಾಸ್ಯದ ಮೂಲಕ ಮುಂಬೈ ಟ್ರಾಫಿಕ್ ಪೊಲೀಸರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಕಾರ್ತಿಕ್ ಅವರ ಲ್ಯಾಂಬರ್ಗಿನಿ ಕಾರಿನ ಚಿತ್ರವನ್ನು ಹಂಚಿಕೊಂಡು ಬಿಸಿ ಮುಟ್ಟಿಸಿದ್ದಾರೆ.

“ಸಮಸ್ಯೆಯೇ ? ಕಾರನ್ನು ರಾಂಗ್ ಸೈಡ್‌ನಲ್ಲಿ ನಿಲ್ಲಿಸಿದ್ದರಿಂದ ಸಮಸ್ಯೆ ! ‘ಶೆಹಜಾದಾಸ್’ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಬಹುದು ಎಂದು ಯೋಚಿಸುವ ‘ತಪ್ಪು’ ಮಾಡಬೇಡಿ.” ಎಂದು ಟ್ವೀಟ್ ಮಾಡಿದ್ದಾರೆ.

ಟ್ರಾಫಿಕ್ ಪೊಲೀಸರು ನಟನ ಕಾರಿನ ನಂಬರ್ ನ ಮರೆಮಾಚಿದ್ದಾರೆ. ಚಲನ್ ಮೊತ್ತವನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಯಾರೇ ವಾಹನ ಹೊಂದಿದ್ದರೂ, ನಟರೇ ಆಗಿರಲಿ, ನೋ ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ ಎಂದು ಸಂಚಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read