ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಕಾಣಿಕೆಹುಂಡಿಯಲ್ಲಿ ಜುಲೈ ತಿಂಗಳಲ್ಲಿ 129.45 ಕೋಟಿ ರೂಪಾಯಿ ಸಂಗ್ರಹವಾಗಿದೆ.
2024ರ ಜುಲೈನಲ್ಲಿ 125 35 ಕೋಟಿ ರೂಪಾಯಿಗೆ ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ 4.09 ಕೋಟಿ ರೂ ಹೆಚ್ಚು ಕಾಣಿಕೆ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಮೂಲಗಳು ಮಾಹಿತಿ ನೀಡಿವೆ. ಬೇಸಿಗೆ ರಜೆ ಮುಗಿದಿದ್ದರಿಂದ ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೂ, ಜುಲೈನಲ್ಲಿ ಭಕ್ತರ ಆಗಮನ ಹೆಚ್ಚಾಗಿದೆ. ಈ ವರ್ಷ ಇದುವರೆಗೆ 23.76 ಲಕ್ಷ ಭಕ್ತರು ತಿರುಪತಿಗೆ ಭೇಟಿ ನೀಡಿದ್ದಾರೆ. ಭಕ್ತರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇಕಡ 7.4 ರಷ್ಟು ಹೆಚ್ಚಳವಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.