ವಿಚಿತ್ರ ವೇಷ ಧರಿಸಿ ಫ್ಯಾಷನ್​ ವೀಕ್​ನಲ್ಲಿ ಪಾಲ್ಗೊಂಡ ಗಾಯಕಿ

ಕೈಲಿ ಜೆನ್ನರ್ ನಂತರ, ಇದೀಗ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ವಿಚಿತ್ರವಾಗಿ ಕಾಣಿಸಿಕೊಂಡ ಅಮೆರಿಕದ ಖ್ಯಾತ ಗಾಯಕಿ ಡೋಜಾ ಕ್ಯಾಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ. ಕಿಸ್ ಮಿ ಮೋರ್ ಎಂಬ ಹಾಡನ್ನು ಹಾಡಿ ಹುಚ್ಚೆಬ್ಬಿಸಿರುವ ಈ ಗಾಯಕಿ ಫ್ಯಾಷನ್​ ಷೋನಲ್ಲಿ ತೊಟ್ಟು ಬಂದ ವಿಚಿತ್ರ ಉಡುಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.

ರೋಜಾ ಕ್ಯಾಟ್​ ತನ್ನ ದೇಹದ ಮೇಲೆ 30 ಸಾವಿರಕ್ಕೂ ಅಧಿಕ ಸ್ಫಟಿಕಗಳಿಂದ ಮಾಡಿದ್ದ ಬಟ್ಟೆ ಧರಿಸಿದ್ದಳು. ದೇಹಕ್ಕೆ ಕೆಂಪು ಬಣ್ಣ ಬಳಿದುಕೊಂಡಿದ್ದಳು. ಈಕೆಯ ಅಡಿಯಿಂದ ಮುಡಿಯವರೆಗೂ ಕೆಂಪು ಬಣ್ಣವನ್ನು ಬಳಿಯಲಾಗಿತ್ತು. ಆಕೆಯ ನೇತಾಡುವ ಕಿವಿಯೋಲೆಗಳು, ನೆಲವನ್ನು ಗುಡಿಸುವ ಕೇಪ್ ಮತ್ತು ಹಿಮ್ಮಡಿಯ ಬೂಟುಗಳೊಂದಿಗೆ ಜನರ ಆಕರ್ಷಣೆಯ ಕೇಂದ್ರ ಬಿಂದುವಾದಳು.

ಇಷ್ಟು ಮೇಕಪ್​ ಮಾಡಲು ಈಕೆ ಸತತ ನಾಲ್ಕು ಗಂಟೆಗಳನ್ನು ತೆಗೆದುಕೊಂಡಳಂತೆ. ಕಠಿಣ ಶ್ರಮದಿಂದ ಇಷ್ಟು ಸುಂದರವಾಗಿ ತನ್ನನ್ನು ತಾನು ಚಿತ್ರಿಸಿಕೊಂಡಿರುವುದಾಗಿ ಈಕೆ ಹೇಳಿದ್ದಾಳೆ. ಫ್ಯಾಷನ್​ ವೀಕ್​ನ ವಿಡಿಯೋ ವೈರಲ್​ ಆಗಿದ್ದು, ಹಲವರು ಸೂಪರ್​ ಎಂದು ಶ್ಲಾಘಿಸುತ್ತಿದ್ದರೆ, ಇನ್ನು ಕೆಲವು ಬಳಕೆದಾರರು ಮಾತ್ರ ಇದು ಫ್ಯಾಷನ್​ ಅಲ್ಲ, ಬದಲಿಗೆ ಭೂತ, ಭಯ, ದೆವ್ವ, ಕಿರಿಕಿರಿ ಎಂದೆಲ್ಲಾ ಬಣ್ಣಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read