ನಾಯಿ ಸಾಕುವವರು ಕ್ರಿಯಾಶೀಲರೂ ದೀರ್ಘಾಯುಷಿಗಳೂ ಆಗ್ತಾರೆ

ನಾಯಿಯನ್ನು ಎಲ್ರೂ ಇಷ್ಟಪಡ್ತಾರೆ, ಮುದ್ದಾಗಿ ಸಾಕ್ತಾರೆ. ಇದರಿಂದ ಶ್ವಾನಕ್ಕೆ ಮಾತ್ರವಲ್ಲ ನಿಮಗೂ ಲಾಭವಿದೆ. ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ. ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಇದು ಪತ್ತೆಯಾಗಿದೆ. 3.4 ಮಿಲಿಯನ್ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಕಳೆದ 12 ವರ್ಷಗಳಿಂದ ಅವರೆಲ್ಲ ನಾಯಿಯನ್ನು ಸಾಕಿದ್ದರು. ವಿಶೇಷ ಅಂದ್ರೆ ಒಬ್ಬರಲ್ಲೂ ಹೃದಯದ ಸಮಸ್ಯೆಯಿಲ್ಲ. ನಾಯಿಯನ್ನು ಸಾಕದೇ ಇರುವವರಿಗೆ ಹೋಲಿಸಿದ್ರೆ ಇವರಲ್ಲಿ ಸಾವಿನ ಅಪಾಯ ಶೇ.20 ರಷ್ಟು ಕಡಿಮೆ ಇದೆ. ಅಷ್ಟೇ ಅಲ್ಲ ಯಾರು ಒಂಟಿಯಾಗಿರ್ತಾರೋ ಅಂಥವರಂತೂ ನಾಯಿ ಸಾಕೋದು ಬೆಸ್ಟ್.

ಅವರಲ್ಲಿ ಸಾವಿನ ಅಪಾಯ ಶೇ.33 ರಷ್ಟು ಕಡಿಮೆಯಾಗಿರುತ್ತದೆ. ಸ್ಟ್ರೋಕ್, ಹೃದಯಾಘಾತದಂತಹ ಸಮಸ್ಯೆಗಳು ಬರುವುದಿಲ್ಲ. ಅಷ್ಟೇ ಅಲ್ಲ ಯಾರು ಪೆಟ್ಸ್ ಸಾಕಿರುತ್ತಾರೋ ಅವರು ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಏಕಾಂಗಿತನ ಬಾಧಿಸುವುದಿಲ್ಲ, ಜೀವನಶೈಲಿ ಉತ್ತಮವಾಗಿರುತ್ತದೆ.

ಪತಿ, ಮಕ್ಕಳು ಸಾಥ್ ಇಲ್ಲದೇ ಒಂಟಿಯಾಗಿರುವವರಿಗೆ ನಾಯಿಗಳನ್ನು ಸಾಕುವುದರಿಂದ ಭಾವನಾತ್ಮಕ ಬೆಂಬಲ ಕೂಡ ದೊರೆಯುತ್ತದೆ. ನೀವು ಯಾವುದೇ ಅಪಾಯಕಾರಿ ಖಾಯಿಲೆಯಿಂದ ಬಳಲ್ತಾ ಇದ್ರೆ ಕೇವಲ ವೈದ್ಯಕೀಯ ಚಿಕಿತ್ಸೆ ಪಡೆಯೋದು ಮಾತ್ರವಲ್ಲ, ಮನೆಯಲ್ಲಿ ಮುದ್ದಾದ ನಾಯಿಯೊಂದನ್ನು ಸಾಕಿ. ಇದರಿಂದ ಒಂದು ಮೂಕ ಪ್ರಾಣಿಗೆ ಆಶ್ರಯ ದೊರೆತಂತಾಗುತ್ತದೆ, ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read