Viral Video: ಎಮ್ಮೆಗಳ ಮೇಲೇರಿ ಸಂಚಾರಕ್ಕೆ ಹೊರಟ ಶ್ವಾನ…!

viral trending video

ಎರಡು ಎಮ್ಮೆಗಳ ಮೇಲೇರಿ ನಾಯಿಯೊಂದು ಸಂಚಾರಕ್ಕೆ ಹೊರಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಈ ದೃಶ್ಯದಲ್ಲಿ ಬೀದಿ ನಾಯಿಯೊಂದು ಎರಡು ಎಮ್ಮೆಗಳ ಮೇಲೆ ನಿಂತು ಸವಾರಿ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಹಲವರು ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಪ್ರತಿ ನಾಯಿಗೂ ಅದರದೇ ಆದ ಕಾಲವೊಂದು ಬರುತ್ತೆ ಎಂಬ ಅಡಿಬರಹದಲ್ಲಿ ಎಮ್ಮೆಗಳ ಮೇಲಿನ ಬೀದಿನಾಯಿ ಸಂಚಾರದ ಫೋಟೋ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಎಮ್ಮೆಗಳ ಮೇಲೆ ಸವಾರಿ ಮಾಡುತ ಶ್ವಾನ ನೀಡಿರುವ ಪೋಸ್ ಹೀರೋಗಳಿಗಿಂತ ಕಡಿಮೆಯಿಲ್ಲ.

ಸಾಮಾನ್ಯವಾಗಿ ಮನುಷ್ಯ ನಾಯಿಗಳೊಂದಿಗೆ ಆಟವಾಡುವುದನ್ನು ಅಥವಾ ಜಾನುವಾರುಗಳಿಗೆ ಆಹಾರ ನೀಡುವುದನ್ನು ತೋರಿಸುವ ಅನೇಕ ವೀಡಿಯೊಗಳು ಅಂತರ್ಜಾಲದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಆದರೆ ಬೀದಿ ನಾಯಿಯೊಂದು ಎಮ್ಮೆಗಳ ಮೇಲೆ ನಿಂತು ಸವಾರಿ ಮಾಡಿರುವ ಈ ಫೋಟೊ ವಿಭಿನ್ನವಾಗಿದೆ. ನಾಯಿಮರಿ ಹಾಗೂ ಎರಡು ಎಮ್ಮೆಗಳು ಈ ಸವಾರಿಯನ್ನು ಸಂತೋಷದಿಂದ ಆನಂದಿಸುತ್ತಿದ್ದಂತಿದೆ. ಈ ಮೂರೂ ಶಾಂತಿಯುತವಾಗಿ ಅಡ್ಡಾಡುತ್ತಿವೆ.

ಈ ವಿಡಿಯೋ ನೋಡಿರುವ ಕೆಲವರು ಮುಂದಿನ ದಿನಗಳಲ್ಲಿ ‘ರಾಷ್ಟ್ರೀಯ ಪ್ರಾಣಿ’ಯಾಗಬಹುದು ಎಂದಿದ್ದಾರೆ, ಇನ್ನು ಕೆಲವರು ‘ನಮ್ಮ ಬಾಹುಬಲಿ’ ಎಂದಿದ್ದಾರೆ. ಮತ್ತೆ ಕೆಲವರು ಇದು ಯಾವ ಚಿತ್ರದ ಶೂಟಿಂಗ್ ? ಇನ್ನಷ್ಟು ಜನರು ‘ಶಭಾಷ್’ ಎಂದು ಕಮೆಂಟ್ ಹಾಕಿದ್ದಾರೆ. ಒಟ್ಟಾರೆ ಎಮ್ಮೆ ಮೇಲೇರಿ ಸಂಚಾರಕ್ಕೆ ಹೊರಟ ಶ್ವಾನದ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

https://twitter.com/PChaudhry_/status/1684119653369643009?ref_src=twsrc%5Etfw%7Ctwcamp%5Etweetembed%7Ctwterm%5E1684119653369643009%7Ctwgr%5E7cd04118835960f1f0ab613663f26adc7615c3cc%7Ctwcon%5Es1_&ref_url=https%3A%2F%2Fwww.newsnationtv.com%2Fviral%2Fnews%2Fdog-riding-on-buffalo-viral-video-on-social-media-392137.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read