ಅದಾನಿ ಪೋರ್ಟ್ ನಿಂದ ಸಾಗಿಸಲಾಗುತ್ತಿತ್ತಾ ಜಾನುವಾರು ? ಫ್ಯಾಕ್ಟ್ ಚೆಕ್ ನಲ್ಲಿ ಅಸಲಿ ಸತ್ಯ ಬಹಿರಂಗ

OpIndia.com on X: "'Trucks full of thousands of cows at Adani port in Gujarat will be taken to Arab countries for slaughter': Know the reality behind the viral video https://t.co/gNpd0zYyIm" / X

ಗುಜರಾತ್ ನ ಅದಾನಿ ಬಂದರಿನಲ್ಲಿ ಸೆರೆಹಿಡಿಯಲಾದ ದೃಶ್ಯವೆಂದು ಬಿಂಬಿಸಿ ಟ್ರಕ್ ನಲ್ಲಿ ಸಾವಿರಾರು ಜಾನುವಾರುಗಳನ್ನು ಯೂರೋಪ್ ದೇಶಗಳಿಗೆ ಸಾಗಿಸಿ ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಗುರಿಯಾಗಿಸಿಕೊಂಡು ಆರೋಪ ಮಾಡಲಾಗಿತ್ತು.

ಈ ವಿಡಿಯೋ ನಿಜಕ್ಕೂ ಗುಜರಾತ್ ನಲ್ಲಿ ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ಬಂದರಿನ ದೃಶ್ಯಗಳಾ ಎಂಬ ಪ್ರಶ್ನೆಗೆ ಉತ್ತರಪಡೆಯುವ ಪ್ರಯತ್ನ ಫ್ಯಾಕ್ಟ್ ಚೆಕ್ ನಲ್ಲಿ ಸತ್ಯಾಂಶ ಬಯಲಾಗಿದೆ. ಇದು ಗುಜರಾತ್ ನ ದೃಶ್ಯವಲ್ಲ ಎಂಬುದು ಗೊತ್ತಾಗಿದೆ. ನ್ಯೂಸ್‌ಚೆಕರ್ ನ ಫ್ಯಾಕ್ಟ್ ಚೆಕ್ ನಲ್ಲಿ ಈ ವಿಡಿಯೋ ಸುಳ್ಳೆಂದು ಕಂಡುಬಂದಿದೆ. ವೀಡಿಯೊ ವಾಸ್ತವವಾಗಿ ಇರಾಕ್‌ನ ಬಂದರಿನದ್ದು ಎಂಬುದು ಸ್ಪಷ್ಟವಾಗಿದೆ.

ವೈರಲ್ ವೀಡಿಯೊವನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ ಉದ್ದನೆಯ ಬಿಳಿ ನಿಲುವಂಗಿಯಲ್ಲಿ ಪುರುಷರನ್ನು ಗುರುತಿಸಲಾಗಿದ್ದು ಇದನ್ನು ಭಾರತದಲ್ಲಿ ಸಾಮಾನ್ಯವಾಗಿ ಧರಿಸುವುದಿಲ್ಲ.

ಇದಲ್ಲದೆ, ವೈರಲ್ ವೀಡಿಯೊದಲ್ಲಿ ಕಂಡುಬರುವ ಟ್ರಕ್‌ಗಳಲ್ಲಿ ‘ಮರ್ಸಿಡಿಸ್ ಬೆಂಜ್’ ಲೋಗೋವನ್ನು ಗುರುತಿಸಲಾಗಿದೆ. ಗಮನಾರ್ಹವಾಗಿ ಮರ್ಸಿಡಿಸ್ ಬೆಂಜ್ ಟ್ರಕ್‌ಗಳು ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವುದಿಲ್ಲ. ಮರ್ಸಿಡಿಸ್ ಬೆಂಜ್ ಗ್ರೂಪ್ ಕಂಪನಿಯಾದ ಡೈಮ್ಲರ್, ‘ಭಾರತ್ ಬೆಂಜ್’ ಹೆಸರಿನಲ್ಲಿ ಟ್ರಕ್‌ಗಳನ್ನು ಮಾರಾಟ ಮಾಡುತ್ತಿದೆ. ಭಾರತ್ ಬೆಂಜ್ ಮತ್ತು ಮರ್ಸಿಡಿಸ್ ಬೆಂಜ್ ಲೋಗೊಗಳು ವಿಭಿನ್ನವಾಗಿವೆ.

ಇರಾಕ್‌ನ ಉಮ್ ಕಸ್ರ್ ಪೋರ್ಟ್ ಅನ್ನು ತೋರಿಸುವ ಅಲ್ ಮಯಾದೀನ್ ಎಂಬ ಚಾನಲ್‌ನ ಯೂಟ್ಯೂಬ್ ವೀಡಿಯೊ ಗಮನಿಸಿದ್ದು, ಪೋರ್ಟ್‌ನ ದೃಶ್ಯಗಳನ್ನು ವೈರಲ್ ದೃಶ್ಯಗಳೊಂದಿಗೆ ಹೋಲಿಸಿದಾಗ, ಎರಡರ ನಡುವೆ ಹಲವಾರು ಸಾಮ್ಯತೆಗಳು ಕಂಡುಬಂದಿವೆ.

ಇರಾಕ್‌ನ ಬಂದರಿನಲ್ಲಿ ಜಾನುವಾರುಗಳನ್ನು ತುಂಬಿದ ಟ್ರಕ್‌ಗಳನ್ನು ತೋರಿಸುವ ವೀಡಿಯೊವನ್ನು ಅದಾನಿ ಬಂದರಿನ ಮೂಲಕ ಹಸುಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬುದು ಫ್ಯಾಕ್ಟ್ ಚೆಕ್ ನಲ್ಲಿ ಗೊತ್ತಾಗಿದೆ.

https://www.youtube.com/shorts/U_CjTrb5VP0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read