ತಣ್ಣೀರು ಕುಡಿಯುವುದರಿಂದ ಬೊಜ್ಜು ಹೆಚ್ಚುತ್ತದೆಯೇ ? ಇಲ್ಲಿದೆ ತಜ್ಞರೇ ಬಹಿರಂಗಪಡಿಸಿರುವ ಸತ್ಯ ಸಂಗತಿ…!

ತಣ್ಣೀರು ಕುಡಿಯುವುದರಿಂದ ಬೊಜ್ಜು ಹೆಚ್ಚಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ತಣ್ಣೀರನ್ನು ಸೇವಿಸಿದಾಗ ನಮ್ಮ ದೇಹವು ಬೆಚ್ಚಗಾಗಲು ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ ಎಂದು ಅನೇಕರು ನಂಬುತ್ತಾರೆ. ಇದು ತೂಕ ಹೆಚ್ಚಾಗಲು ಕಾರಣ ಎಂಬುದು ಅವರ ಭಾವನೆ. ಆದರೆ ಇದು ನಿಜವೇ? ತಣ್ಣೀರು ಕುಡಿಯುವುದರಿಂದ ಬೊಜ್ಜು ಬರಬಹುದೇ? ಇದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ನೋಡೋಣ.

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಆರೋಗ್ಯವಾಗಿರಬಹುದು, 19 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಪ್ರತಿದಿನ ಕನಿಷ್ಠ 3.7 ಲೀಟರ್ ನೀರನ್ನು ಕುಡಿಯಬೇಕು. 19 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ದಿನಕ್ಕೆ ಕನಿಷ್ಠ 2.7 ಲೀಟರ್ ನೀರನ್ನು ಕುಡಿಯಬೇಕು.

ಆದರೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಇದಕ್ಕಿಂತ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ತಾಜಾತನವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ನಾವು ಶಕ್ತಿಯುತವಾಗಿರುತ್ತೇವೆ. ಇದು ನಮ್ಮ ಚರ್ಮಕ್ಕೂ ಪ್ರಯೋಜನಕಾರಿ.

ತಣ್ಣೀರಿನ ಬಗ್ಗೆ ಸಾಮಾನ್ಯ ನಂಬಿಕೆಯೆಂದರೆ ಅದರಿಂದ ತೂಕ ಹೆಚ್ಚಾಗುತ್ತದೆ ಎಂಬುದು. ಆದರೆ ತಣ್ಣೀರಿಗೂ ತೂಕ ಹೆಚ್ಚಳಕ್ಕೂ ಯಾವುದೇ ಸಂಬಂಧವಿಲ್ಲ. ನೀರು ಯಾವುದೇ ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಅದು ತೂಕವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆದರೆ ತಣ್ಣೀರು ಇತರ ಅನಾನುಕೂಲಗಳನ್ನು ಹೊಂದಿರಬಹುದು.

ತಣ್ಣೀರು ಗ್ಯಾಸ್, ಮಲಬದ್ಧತೆ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಗಂಟಲಿನಲ್ಲಿ ನೋವು ಅಥವಾ ಊತಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ತಣ್ಣೀರು ಕುಡಿಯುವುದರಿಂದ ತಲೆನೋವಿನ ಸಮಸ್ಯೆ ಬರಬಹುದು. ಹಲ್ಲಿನ ನೋವು ಅಥವಾ ಸೆನ್ಸಿಟಿವಿಟಿ ಹೆಚ್ಚಾಗಬಹುದು.

ಹೆಚ್ಚಿನ ಪ್ರಮಾಣದಲ್ಲಿ ತಣ್ಣನೆಯ ನೀರನ್ನು ಸೇವಿಸಿದರೆ ಮಾತ್ರ ಈ ಎಲ್ಲಾ ಅಪಾಯಗಳಾಗುತ್ತವೆ. ಸಾಮಾನ್ಯ ತಣ್ಣೀರು ಅಥವಾ ರೂಮ್‌ ಟೆಂಪ್ರೇಚರ್‌ ನೀರನ್ನು ಕುಡಿಯುವುದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ. ಫ್ರಿಡ್ಜ್‌ನಲ್ಲಿಟ್ಟ ನೀರನ್ನು ಕುಡಿಯಬಾರದು. ಆಗ ದೇಹವು ತನ್ನ ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read