ವೃದ್ಧನ ಗುದನಾಳದಲ್ಲಿತ್ತು ಬರೋಬ್ಬರಿ 16 ಇಂಚು ಉದ್ದದ ಸೋರೆಕಾಯಿ; ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು….!

ಮಧ್ಯಪ್ರದೇಶದಲ್ಲಿ ವಿಲಕ್ಷಣ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ 60 ವರ್ಷದ ವೃದ್ಧನೊಬ್ಬ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ವೇಳೆ ಆತನ ಎಕ್ಸ್ ರೇ ಮಾಡಿದ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ವೃದ್ಧನ ಗುದನಾಳದಲ್ಲಿ ಬರೋಬ್ಬರಿ 16 ಇಂಚು ಉದ್ದದ ಸೋರೆಕಾಯಿ ಕಂಡು ಬಂದಿದ್ದು, ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಅದನ್ನು ಹೊರ ತೆಗೆಯಲಾಗಿದೆ.

ಈ ವೃದ್ಧ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ಸಹ ಅದನ್ನು ನಿರ್ಲಕ್ಷ್ಯ ಮಾಡಿದ್ದ. ಇತ್ತೀಚೆಗೆ ಹೊಟ್ಟೆ ನೋವು ಉಲ್ಬಣಗೊಂಡಿದ್ದು, ಹೀಗಾಗಿ ಅನಿವಾರ್ಯವಾಗಿ ಆಸ್ಪತ್ರೆಗೆ ತೆರಳಿದ್ದಾನೆ. ವೈದ್ಯರು ಮೊದಲಿಗೆ ಮಾಮೂಲಿ ಹೊಟ್ಟೆ ನೋವಿರಬಹುದು ಎಂದು ಅದಕ್ಕೆ ಚಿಕಿತ್ಸೆ ನೀಡಲು ಮುಂದಾಗಿದ್ದರು. ಆದರೆ ಅನುಮಾನಗೊಂಡು ಎಕ್ಸ್ ರೇ ಮಾಡಿಸಿದಾಗ ಅಸಲಿ ವಿಷಯ ಗೊತ್ತಾಗಿದೆ.

ಕೂಡಲೇ ವೈದ್ಯರುಗಳಾದ ಮನೋಜ್ ಚೌಧರಿ, ನಂದ ಕಿಶೋರ್, ಆಶಿಶ್ ಶುಕ್ಲಾ ಹಾಗೂ ಸಂಜಯ್ ಮೌರ್ಯ ಅವರನ್ನೊಳಗೊಂಡ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ 16 ಇಂಚು ಉದ್ದದ ಸೋರೆಕಾಯಿಯನ್ನು ಹೊರ ತೆಗೆದಿದ್ದಾರೆ. ಮೇಲ್ನೋಟಕ್ಕೆ ವೃದ್ಧ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಂತೆ ಕಾಣುತ್ತಿದ್ದು, ಯಾವ ಕಾರಣಕ್ಕೆ ಸೋರೆಕಾಯಿ ತನ್ನ ಗುದನಾಳದಲ್ಲಿ ಇಟ್ಟುಕೊಂಡಿದ್ದ ಎಂಬುದು ತಿಳಿದು ಬಂದಿಲ್ಲವೆಂದು ವೈದ್ಯರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read