ಮೀರತ್: ವೈದ್ಯನ ನಿರ್ಲಕ್ಷಕ್ಕೆ ರೋಗಿಯೊಬ್ಬ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಮೀರತ್ ನಲ್ಲಿ ನಡೆದಿದೆ.
ವೈದ್ಯನೊಬ್ಬ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕುರ್ಚಿಯಲ್ಲಿ ಗಡದ್ದಾಗಿ ನಿದ್ರೆಗೆ ಜಾರಿದ್ದಾರೆ. ಪಕ್ಕದಲ್ಲೇ ಸ್ಟ್ರೆಚರ್ ನಲ್ಲಿದ್ದ ರೋಗಿಯೊಬ್ಬ ನರಳಾಡಿದರೂ ಎಚ್ಚೆತ್ತು ಚಿಕಿತ್ಸೆ ನೀಡಿಲ್ಲ. ರೋಗಿ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.
ಮೀರತ್ ನ ಎಲ್.ಎಲ್.ಆರ್.ಎಂ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ವೈದ್ಯ ಕುರ್ಚಿ ಮೇಲೆ ,ಮಲಗಿ ನಿದ್ರಿಸುತ್ತಿರುವ ದೃಶ್ಯ ವೈರಲ್ ಆಗಿದೆ. ವೈದ್ಯನ ಬೇಜವಾಬ್ದಾರಿಗೆ ರೋಗಿ ಮಂಚದ ಮೇಲೆಯೇ ಪ್ರಾಣಬಿಟ್ಟಿದ್ದಾರೆ.