5 ವರ್ಷದಿಂದ ಯಾತನೆ ಅನುಭವಿಸುತ್ತಿದ್ದ ವ್ಯಕ್ತಿಯ ಹೊಟ್ಟೆಯಲ್ಲಿದ್ದ ಮೀನಿನ ಮೂಳೆ ಹೊರತೆಗೆದ ವೈದ್ಯರು

ಬೆಂಗಳೂರು: ಕಳೆದ 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯಲ್ಲಿ ಸಿಲುಕಿದ್ದ ಮೀನಿನ ಎರಡು ಸೆಂಟಿಮೀಟರ್ ಉದ್ದದ ಮೂಳೆಯನ್ನು ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಯಾತನೆ ಅನುಭವಿಸುತ್ತಿದ್ದ 61 ವರ್ಷದ ವ್ಯಕ್ತಿಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಗುಣಪಡಿಸಿದೆ. ಹೊನ್ನಾವರದ ವ್ಯಕ್ತಿ ಐದು ವರ್ಷದ ಹಿಂದೆ ಮೀನು ತಿನ್ನುವ ಸಂದರ್ಭದಲ್ಲಿ ಗಂಟಲಲ್ಲಿ ಮೀನಿನ ಮೂಳೆ ಸಿಲುಕಿ ನಂತರ ಹೊಟ್ಟೆ ಸೇರಿಕೊಂಡಿತ್ತು. ಅವರು ಖಾಸಗಿ ಆಸ್ಪತ್ರೆಗೆ ಹೋಗಿ ಒಂದು ಮೂಳೆ ತೆಗೆಸಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ಗೊತ್ತಾಗಿರಲಿಲ್ಲ. ಪೂರ್ತಿಯಾಗಿ ಮೂಳೆ ತೆಗೆಯದ ಕಾರಣ ಎರಡು ಸೆಂಟಿಮೀಟರ್ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲಿಯೇ ಉಳಿದಿತ್ತು.

ಕಳೆದ ಐದು ವರ್ಷದಿಂದ ವ್ಯಕ್ತಿ ಹೊಟ್ಟೆ ನೋವು ಅನುಭವಿಸುತ್ತಿದ್ದರು. ನಂತರ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿದೆ. ನಾಗರಬಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗ ವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಲ್ಯಾಪರೋಸ್ಕೋಪಿಕ್ ಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ಹೊರ ತೆಗೆಯಲಾಗಿದ್ದು ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read