ಒಳ ಉಡುಪುಗಳಿಂದಲೇ ಹಲವಾರು ರೋಗಗಳು ಅಂಟಿಕೊಳ್ಳುತ್ತವೆ. ಹಾಗಾಗಿ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.ನಿತ್ಯ ಬಳಸುವ ಒಳ ಉಡುಪುಗಳನ್ನು ಯಾವುದೇ ಕಾರಣಕ್ಕೂ ಒಗೆಯದೆ ಎರಡನೇ ದಿನಕ್ಕೆ ಬಳಸದಿರಿ. ಇದರಿಂದ ಸೋಂಕು ಹರಡುವ ಸಾಧ್ಯತೆ ಅಧಿಕ.
ಎಲ್ಲಾ ಬಟ್ಟೆಗಳೊಂದಿಗೆ ಅಥವಾ ಮನೆಯ ಇತರರ ಉಡುಪುಗಳೊಂದಿಗೆ ಇದನ್ನೂ ಸೇರಿಸಿ ವಾಶಿಂಗ್ ಮೆಷಿನ್ ನಲ್ಲಿ ಒಗೆಯದಿರಿ. ಸ್ನಾನ ಮಾಡುವಾಗಲೇ ತೊಳೆದು ಹಾಕಿ. ಬಳಿಕ ಬಿಸಿ ನೀರಿನಲ್ಲಿ ಮುಳುಗಿಸಿ ತೆಗೆಯುವುದು ಮತ್ತೂ ಒಳ್ಳೆಯದು.
ಕಂಫರ್ಟ್ ಬಳಸುವುದರಿಂದ ಕೆಲವರಿಗೆ ಅಲರ್ಜಿಯಂಥ ಸಮಸ್ಯೆಗಳು ಕಂಡು ಬಂದಾವು. ಹೀಗಾಗಿ ಒಣಗಿಸುವ ಮೊದಲು ಬೆಚ್ಚಗಿನ ನೀರಿನಲ್ಲಿ ಒಮ್ಮೆ ಮುಳುಗಿಸಿ ತೆಗೆದರೆ ಸಾಕು. ಉತ್ತಮ ಗಾಳಿಯಾಡುವ ಪ್ರದೇಶದಲ್ಲೇ ಒಣಗಿಸಿ. ಸೂರ್ಯನ ಬಿಸಿಲು ನೇರವಾಗಿ ಬಿದ್ದರೆ ಮತ್ತೂ ಒಳ್ಳೆಯದು.
ತೊಳೆಯದ ಒಂದೇ ಒಳ ವಸ್ತ್ರವನ್ನು ಹಲವು ದಿನಗಳ ಕಾಲ ಬಳಸುವುದರಿಂದ ಹೆಚ್ಚು ಕೀಟಾಣುಗಳು ಉತ್ಪತ್ತಿಯಾಗಿ ನಿಮ್ಮನ್ನು ಹೊಸ ಕಾಯಿಲೆಗಳು ಕಾಡಲು ಆರಂಭಿಸಬಹುದು.
• ಸೋಂಕುಗಳು: ಸ್ವಚ್ಛತೆಯ ಕೊರತೆಯು ಬ್ಯಾಕ್ಟೀರಿಯಾ ಮತ್ತು ವೈರಸ್ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ, ಇದರಿಂದಾಗಿ ಜನನಾಂಗದ ಸೋಂಕುಗಳು ಉಂಟಾಗುತ್ತವೆ.
• ಚರ್ಮದ ಕಿರಿಕಿರಿ: ಒಳ ಉಡುಪುಗಳನ್ನು ದಿನವಿಡೀ ಅಥವಾ ಹೆಚ್ಚು ಸಮಯದವರೆಗೆ ಧರಿಸುವುದರಿಂದ ಬೆವರುವಿಕೆ ಮತ್ತು ತೇವಾಂಶ ಹೆಚ್ಚಾಗಿ ಚರ್ಮದ ಕಿರಿಕಿರಿ ಉಂಟಾಗಬಹುದು.
• ವೀರ್ಯಾಣುಗಳ ಸಂಖ್ಯೆ ಇಳಿಕೆ: ಪುರುಷರಲ್ಲಿ, ತುಂಬಾ ಬಿಗಿಯಾದ ಮತ್ತು ಸ್ವಚ್ಛವಿಲ್ಲದ ಒಳ ಉಡುಪುಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಕುಗ್ಗಿಸಬಹುದು, ಇದು ಬಂಜೆತನಕ್ಕೆ ಕಾರಣವಾಗಬಹುದು.
ಸುಗಂಧವಿಲ್ಲದ ಮತ್ತು ಮೃದುವಾದ ಡಿಟರ್ಜೆಂಟ್ಗಳನ್ನು ಬಳಸಿ, ಏಕೆಂದರೆ ಸುಗಂಧಿತ ರಾಸಾಯನಿಕಗಳು ಚರ್ಮಕ್ಕೆ ಹಾನಿ ಮಾಡಬಹುದು. ಇದನ್ನು ಬಿಸಿ ನೀರಿನಲ್ಲಿ ತೊಳೆಯುವುದು ಸೂಕ್ತ.
