ಸೊಳ್ಳೆ ಓಡಿಸಲು ಕಾಯಿಲ್‌ ಹಚ್ತೀರಾ ? ಎಚ್ಚರ…….! ನಿಮ್ಮನ್ನು ಅಪಾಯಕ್ಕೆ ದೂಡಬಹುದು ಈ ಕೆಲಸ

ಬೇಸಿಗೆ, ಚಳಿಗಾಲ, ಮಳೆಗಾಲ ಎನ್ನದೇ ಸದಾಕಾಲ ಸೊಳ್ಳೆಗಳ ಕಾಟ ಇದ್ದೇ ಇರುತ್ತದೆ. ಮನೆಯಿಂದ ಸೊಳ್ಳೆಗಳನ್ನು ಓಡಿಸುವುದು ಸುಲಭದ ಕೆಲಸವಲ್ಲ. ಅನೇಕರು ಸೊಳ್ಳೆಗಳಿಂದ ಪಾರಾಗಲು ಕಾಯಿಲ್‌ಗಳನ್ನು ಬಳಸುತ್ತಾರೆ. ಈ ಸೊಳ್ಳೆ ನಿವಾರಕ ಕಾಯಿಲ್‌ಗಳಿಂದ ಅನೇಕ ಅನಾನುಕೂಲತೆಗಳಿವೆ. ಅದರಿಂದ ಹೊರಹೊಮ್ಮುವ ಹೊಗೆ ವಿಷಕಾರಿಯಾಗಿದೆ.

ಅದು ಗಂಭೀರ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಸೊಳ್ಳೆ ಕಾಯಿಲ್ ತಯಾರಿಸಲು ಹಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಬೆಂಜೊ ಫ್ಲೋರೊಇಥೇನ್ ಮತ್ತು ಬೆಂಜೊ ಪೈರಿನ್‌ಗಳಂತಹ ಅಂಶಗಳನ್ನು ಒಳಗೊಂಡಿದೆ. ಇವು ಅಸ್ತಮಾವನ್ನು ಉಂಟುಮಾಡುತ್ತವೆ.

ನವಜಾತ ಶಿಶುಗಳಿಗೆ ತೊಂದರೆ: ನವಜಾತ ಶಿಶು ಅಥವಾ 6 ತಿಂಗಳಿಗಿಂತ ಕಡಿಮೆ ವಯಸ್ಸಿನ ಯಾವುದೇ ಮಗುವಿನ ಬಳಿ ಸೊಳ್ಳೆ ಕಾಯಿಲ್‌ಗಳನ್ನು ಇಡಬೇಡಿ. ಅದರಿಂದ ಹೊರಹೊಮ್ಮುವ ಹೊಗೆ ಮಗುವಿಗೆ ಹಾನಿಕಾರಕ.

ಚರ್ಮದ ದದ್ದು : ಸೊಳ್ಳೆ ಕಾಯಿಲ್‌ನ ಹೊಗೆಯನ್ನು ದೀರ್ಘ ಸಮಯದವರೆಗೆ ಸೇವಿಸಿದರೆ ಚರ್ಮದ ದದ್ದು ಉಂಟಾಗುತ್ತದೆ. ಸೊಳ್ಳೆ ಸುರುಳಿಯಿಂದ ಹೊರಸೂಸುವ ಹೊಗೆಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ.

ಕಣ್ಣುಗಳಿಗೆ ಹಾನಿ : ಸೊಳ್ಳೆ ಕಾಯಿಲ್ ಬಳಕೆ ಕಣ್ಣಿಗೆ ಹಾನಿಕಾರಕ. ಅದರಿಂದ ಹೊರಹೊಮ್ಮುವ ಹೊಗೆ ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಮಸುಕನ್ನು ಉಂಟುಮಾಡಬಹುದು. ಕೆಲವೊಮ್ಮೆ ಸಮಸ್ಯೆ ಎಷ್ಟು ಗಂಭೀರವಾಗುತ್ತದೆ ಎಂದರೆ ಹೊಗೆಯಿಂದಾಗಿ ಕಣ್ಣಿನ ಪೊರೆಯಂತಹ ಕಾಯಿಲೆ ಬರಬಹುದು.

ಉಸಿರಾಟದ ತೊಂದರೆಗಳು : ಕೆಲವರು ಹಾಸಿಗೆಯ ಕೆಳಗೆ ಸೊಳ್ಳೆ ಕಾಯಿಲ್‌ ಹಚ್ಚಿಟ್ಟುಕೊಳ್ತಾರೆ. ಇದರಿಂದ ಹೊಗೆ ನೇರವಾಗಿ ಅವರ ದೇಹದೊಳಗೆ ಹೋಗುತ್ತದೆ. ಸೊಳ್ಳೆ ಕಾಯಿಲ್‌ನಲ್ಲಿರುವ ಅನೇಕ ಹಾನಿಕಾರಕ ರಾಸಾಯನಿಕಗಳು ಗಂಭೀರ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಇದನ್ನು ತುಂಬಾ ಹತ್ತಿರ ಇಡುವುದರಿಂದ ಉಸಿರಾಟದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read