ಊಟದ ಸಮಯದಲ್ಲಿ ಟಿವಿ ನೋಡ್ತೀರಾ‌ ? ಈ ಕೆಟ್ಟ ಅಭ್ಯಾಸದಿಂದ ಕಾಡಬಹುದು ʼಆರೋಗ್ಯʼ ಸಮಸ್ಯೆ

ಊಟ ಮಾಡುವಾಗ ಮಾತನಾಡಬಾರದು ಅಂತಾ ಹಿರಿಯರು ಹೇಳುವುದನ್ನು ನೀವೂ ಕೇಳಿರಬಹುದು. ಇದರ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿವೆ. ಊಟ ಮಾಡುವಾಗ ಸಂಪೂರ್ಣ ಗಮನ ಆಹಾರದ ಮೇಲಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಊಟ, ಉಪಹಾರದ ಸಂದರ್ಭದಲ್ಲೂ ಮೊಬೈಲ್‌ ಹಾಗೂ ಟಿವಿ ವೀಕ್ಷಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಮಕ್ಕಳು, ಹಿರಿಯರಿಂದ ಹಿಡಿದು ಎಲ್ಲರ ಗಮನವೂ ಊಟದ ಸಮಯದಲ್ಲಿ ಕೂಡ ಟಿವಿ, ಮೊಬೈಲ್‌ ಮೇಲಿರುತ್ತದೆ. ಊಟ ಮಾಡುವಾಗ ಮೊಬೈಲ್ ಅಥವಾ ಟಿವಿ ನೋಡುವುದರಿಂದ ಅನೇಕ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಆಹಾರ ಸೇವಿಸುವಾಗ ಟಿವಿ ಅಥವಾ ಮೊಬೈಲ್ ಏಕೆ ಬಳಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಟಿವಿ ನೋಡುತ್ತ ಊಟ ಅಥವಾ ಉಪಹಾರ ಮಾಡಿದರೆ ಅತಿಯಾಗಿ ತಿನ್ನುತ್ತೇವೆ.

ಇದು ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ. ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗಿ ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ.ಈ ಅಭ್ಯಾಸದಿಂದಾಗಿ ನಮಗೆ ಸಕ್ಕರೆ ಕಾಯಿಲೆ ಬರಬಹುದು. ಚಯಾಪಚಯವು ನಿಧಾನವಾಗಬಹುದು. ಅಷ್ಟೇ ಅಲ್ಲ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯೂ ಉದ್ಭವಿಸಬಹುದು.

ಆಹಾರ ಸೇವಿಸುವಾಗ ಟಿವಿ, ಮೊಬೈಲ್ ಬಳಸುವವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು. ಜೀರ್ಣಕ್ರಿಯೆ ದುರ್ಬಲವಾಗುವ ಸಾಧ್ಯತೆಯೂ ಇದೆ. ಇದಲ್ಲದೆ ಆಹಾರ ಸೇವಿಸುವಾಗಲೂ ಮೊಬೈಲ್‌, ಟಿವಿ ಬಳಸುವವರು ಯಾವಾಗಲೂ ನಿದ್ರೆಯ ಕೊರತೆಯಿಂದ ಬಳಲುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read