ಚಾಲಕನಿಲ್ಲದ ಕಾರಿನಲ್ಲಿ ವೃದ್ಧರ ಪಯಣ: ಸಂತಸದ ಅನುಭವ ಬಿಚ್ಚಿಟ್ಟ ಅಜ್ಜಂದಿರು

ಸ್ವಯಂ-ಚಾಲನಾ ಕಾರುಗಳನ್ನು ಇದಾಗಲೇ ಕಂಡು ಹಿಡಿಯಲಾಗಿದೆ. ಇದರ ಕುತೂಹಲದ ವಿಡಿಯೋ ಒಂದು ವೈರಲ್​ ಆಗಿದೆ. ಚಾಲಕನಿಲ್ಲದ ಕಾರಿನಲ್ಲಿ ಕುಳಿತ ಇಬ್ಬರು ವೃದ್ಧರು ದಂಗು ಬಡಿಯುವುದನ್ನು ಇದರಲ್ಲಿ ನೋಡಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೇಟ್ರಿಯಾಟಿಕ್ ಕೆನ್ನಿ ಎಂಬ ಬಳಕೆದಾರ ಹೆಸರಿನ ಬಳಕೆದಾರರು ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. 81 ವರ್ಷದ ವ್ಯಕ್ತಿ ತನ್ನ ಸ್ನೇಹಿತ ಜೆರ್ರಿ ಮತ್ತು ಅಮಂಡಾ ಕ್ಲೈನ್ ಎಂಬುವವರ ಜೊತೆ ಕಾರಿನಲ್ಲಿ ಪ್ರಯಾಣಿಸುವುದನ್ನು ನೋಡಬಹುದು. ಕೆನ್ನಿ ಅವರು ಉಬರ್ ಬರುವಿಕೆಗಾಗಿ ಕಾಯುತ್ತಿದ್ದರೆ, ಬಂದಿದ್ದು, ಚಾಲಕನಿಲ್ಲದ ಕಾರು. ಇದನ್ನು ನೋಡಿ ಅವರು ದಿಗ್ಭ್ರಮೆಗೊಂಡರು.

ಚಾಲಕನಿಲ್ಲದ ಕಾರಿನಲ್ಲಿ ಸವಾರಿ ಮಾಡಿದ ಬಳಿಕ ವೃದ್ಧರು, ಖಂಡಿತವಾಗಿಯೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ತುಂಬಾ ಉಲ್ಲಾಸಕರ ರೈಡಿಂಗ್​ ಅನುಭವವಾಯಿತು ಎಂದಿದ್ದಾರೆ.

https://www.youtube.com/watch?v=QMkJWNmHcO8

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read