ʼಪುಸ್ತಕʼದ ಮೇಲೆ ತಲೆ ಇಟ್ಟು ಮಲಗ್ತೀರಾ……? ವಾಸ್ತು ಪ್ರಕಾರ ಇದು ನೀಡುತ್ತೆ ಈ ಸಂಕೇತ

ರಾತ್ರಿ ವೇಳೆ ಓದಿ ಮಲಗುವ ಅಭ್ಯಾಸ ಅನೇಕರಿಗಿರುತ್ತದೆ. ನಿದ್ರೆ ಬಂದ ವೇಳೆ ಪುಸ್ತಕದ ಮೇಲೆಯೇ ತಲೆಯಿಟ್ಟು ಮಲಗಿಬಿಡ್ತಾರೆ. ರಾತ್ರಿ ವೇಳೆ ಪುಸ್ತಕದ ಮೇಲೆ ತಲೆಯಿಟ್ಟು ಮಲಗುವುದು ಅಶುಭ ಸಂಕೇತ.

ಹೌದು, ಓದುತ್ತ ಓದುತ್ತ ನಿದ್ರೆ ಬಂದು ಬಿಡುತ್ತದೆ. ಹಾಗೆ ಪುಸ್ತಕದ ಮೇಲೆ ತಲೆಯಿಟ್ಟು ಮಲಗಿ ಬಿಡ್ತೇವೆ. ಬೆಳಿಗ್ಗೆ ಎದ್ದು ನೋಡಿದ್ರೆ ತಲೆ ಕೆಳಗೆ ಪುಸ್ತಕವಿರುತ್ತದೆ. ಅಕ್ಕಪಕ್ಕದಲ್ಲೆಲ್ಲೋ ಪುಸ್ತಕ ಬಿದ್ದಿರುತ್ತದೆ. ಪುಸ್ತಕ ಓದಿ ಮಲಗುವುದು ಒಳ್ಳೆಯ ಹವ್ಯಾಸ. ಆದ್ರೆ ಪುಸ್ತಕದ ಮೇಲೆ ಮಲಗುವುದು ತಪ್ಪು. ವಾಸ್ತು ಪ್ರಕಾರ ಇದು ನಿಮ್ಮ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.

ಅನೇಕರು ಹಾಸಿಗೆ ಬದಿಯಲ್ಲಿ ತಲೆ ಹತ್ತಿರ ಪುಸ್ತಕವಿಟ್ಟು ಮಲಗ್ತಾರೆ. ಇದು ಕೂಡ ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಇದು ನಿಮ್ಮ ವೃತ್ತಿ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಆರೋಗ್ಯ ಕೂಡ ಹದಗೆಡುತ್ತದೆ.

ರಾತ್ರಿ ಮಲಗುವ ವೇಳೆ ತಲೆ ಬದಿಯಲ್ಲಿ ನೀರಿನ ಬಾಟಲ್ ಇಟ್ಟು ಮಲಗ್ತೇವೆ. ಈ ಹವ್ಯಾಸ ನಿಮಗೂ ಇದ್ದರೆ ಇಂದೇ ಇದನ್ನು ಬಿಟ್ಟುಬಿಡಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀರನ್ನು ತಲೆ ಬದಿಯಲ್ಲಿಟ್ಟು ಮಲಗುವುದರಿಂದ ಮೆದುಳಿನ ಮೇಲೆ ಪ್ರಭಾವವುಂಟಾಗುತ್ತದೆ.

ತಲೆ ಹತ್ತಿರ ಮೊಬೈಲ್ ಇಟ್ಟು ಮಲಗುವುದು ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರ ಕೂಡ ಇದನ್ನೇ ಹೇಳುತ್ತದೆ.

ಕೆಲವರು ಮಲಗುವಾಗ ಪರ್ಸನ್ನು ತಲೆ ಬದಿಯಲ್ಲಿಟ್ಟು ಮಲಗುತ್ತಾರೆ. ಇದು ಕೂಡ ಕೆಟ್ಟದ್ದು. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ ತಲೆದೋರುತ್ತದೆ. ಖರ್ಚು ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read