ಈ ದೇವಾಲಯಕ್ಕೆ ಹೋಗಲು ಜನ ಹೆದರುವುದೇಕೆ ಗೊತ್ತಾ……!

ಪ್ರವಾಸಿಗರಿಗೆ ಭಾರತದಲ್ಲಿ ನೋಡಲು ಸಾಕಷ್ಟು ಸುಂದರ ಸ್ಥಳಗಳಿವೆ. ಅನೇಕ ದೇವಸ್ಥಾನಗಳಿವೆ.  ಐತಿಹಾಸಿಕ ದೇವಸ್ಥಾನಗಳನ್ನು ನೋಡಲು ವಿದೇಶಗಳಿಂದಲೂ ಜನ ಬರ್ತಾರೆ. ಆದ್ರೆ ಅಲ್ಲಿರುವ ದೇವಸ್ಥಾನವೊಂದು ಬಹಳ ಅಪಾಯಕಾರಿ. ದೇವಸ್ಥಾನಕ್ಕೆ ಹೋಗಲು ಜನರು ಹೆದರುತ್ತಾರೆ.

ಆಶ್ಚರ್ಯವಾದ್ರೂ ಇದು ಸತ್ಯ. ಭಯ ಹುಟ್ಟಿಸುವ ದೇವಸ್ಥಾನವಿರುವುದು ಹಿಮಾಚಲ ಪ್ರದೇಶದಲ್ಲಿ. ಅದು ಯಮರಾಜನ ದೇವಸ್ಥಾನ. ಹಾಗಾಗಿ ಈ ದೇವಸ್ಥಾನಕ್ಕೆ ಹೋಗಲು ಜನರು ಹೆದರುತ್ತಾರೆ. ಯಮ ದೇವನಿಗಾಗಿ ನಿರ್ಮಾಣವಾಗಿರುವ ಈ ದೇವಸ್ಥಾನ ಚಂಬಾ ಜಿಲ್ಲೆಯ ಭರಮೌರ್ ಪ್ರದೇಶದಲ್ಲಿದೆ.

ದೆಹಲಿಯಿಂದ 500 ಕಿಲೋಮೀಟರ್ ದೂರದಲ್ಲಿದೆ ಈ ದೇವಸ್ಥಾನ. ನೋಡಲು ಸಣ್ಣ ಮನೆಯಂತೆ ಕಾಣುತ್ತದೆ ಈ ದೇವಸ್ಥಾನ. ಇದ್ರಲ್ಲಿರುವ ಖಾಲಿ ಕೋಣೆಯನ್ನು ಚಿತ್ರಗುಪ್ತನ ಕೋಣೆ ಎನ್ನಲಾಗುತ್ತದೆ. ಸಾವನ್ನಪ್ಪಿದ ನಂತ್ರ ಮೊಟ್ಟ ಮೊದಲು ಆತ್ಮ ಈ ದೇವಸ್ಥಾನಕ್ಕೆ ಬರುತ್ತೆ ಎಂದು ನಂಬಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read