ಹೀಟ್ ಸ್ಟ್ರೋಕ್‌ನಿಂದ ಮೂರ್ಛೆ ಹೋದವರಿಗೆ ನೀರು ಕೊಡುವುದು ಅಪಾಯಕಾರಿ ಯಾಕೆ ಗೊತ್ತಾ…?

ಸದ್ಯ ಹಲವು ರಾಜ್ಯಗಳಲ್ಲಿ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಶಾಖದ ಹೊಡೆತದ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಟ್‌ ವೇವ್‌ನಿಂದಾಗಿ ದೇಹದ ಉಷ್ಣತೆ ಹೆಚ್ಚಾಗುತ್ತದೆ, ಇದು ಪ್ರಜ್ಞಾಹೀನತೆ, ರೋಗಗ್ರಸ್ತವಾಗುವಿಕೆ ಮತ್ತು ಸಾವಿಗೆ ಕಾರಣವಾಗಬಹುದು.

ಇತ್ತೀಚಿಗೆ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಅಚ್ಚರಿಯ ಸಂಗತಿಯೊಂದನ್ನು ತಿಳಿಹೇಳಲಾಗಿದೆ. ಬಿಸಿಲ ತಾಪದಿಂದ ಯಾರಾದರೂ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರೆ,  ಆ  ವ್ಯಕ್ತಿಗೆ ಅಪ್ಪಿತಪ್ಪಿಯೂ ಕುಡಿಯಲು ನೀರು ಕೊಡಬಾರದು. ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ.

ಶಾಖದ ಹೊಡೆತದ ಸಂದರ್ಭದಲ್ಲಿ ದೇಹದ ಉಷ್ಣತೆಯು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆ ಸಮಯದಲ್ಲಿ ಪ್ರಜ್ಞಾಹೀನ ವ್ಯಕ್ತಿಗೆ ಇದ್ದಕ್ಕಿದ್ದಂತೆ ನೀರು ಕುಡಿಯಲು ಕೊಟ್ಟರೆ ಅದು ಅಪಾಯಕಾರಿ. ಏಕೆಂದರೆ ದೇಹದ ಉಷ್ಣತೆಯು ವೇಗವಾಗಿ ಕಡಿಮೆಯಾಗುವಿಕೆ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು. ಈ ಕಾರಣದಿಂದಾಗಿ ಹಾರ್ಟ್‌ಫೇಲ್‌ ಆಗುವ ಸಾಧ್ಯತೆಯೂ ಇರುತ್ತದೆ.

ಶಾಖದ ಹೊಡೆತದಿಂದ ಯಾರಾದರೂ ಮೂರ್ಛೆ ಹೋಗಿದ್ದರೆ ತಕ್ಷಣ ಅವರನ್ನು ನೆರಳಿನ ಸ್ಥಳಕ್ಕೆ ಕರೆದುಕೊಂಡು ಹೋಗಿ, ಬಟ್ಟೆಗಳನ್ನು ಸಡಿಲಿಸಿ. ವ್ಯಕ್ತಿಯ ಹಣೆ, ಕೈ ಮತ್ತು ಕಾಲುಗಳ ಮೇಲೆ ತಣ್ಣನೆಯ ಒದ್ದೆಯಾದ ಬಟ್ಟೆಯನ್ನು ಇರಿಸಿ ಮತ್ತು ಫ್ಯಾನ್ ಆನ್ ಮಾಡಿ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ನೀರು ಅಥವಾ ದ್ರವವನ್ನು ನೀಡಬೇಡಿ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಸಾಧ್ಯವಾದಷ್ಟು ಬೇಗ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅಥವಾ ಪ್ರಜ್ಞಾಹೀನ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ.

ವಿಪರೀತ ಸೆಖೆಯಿದ್ದಾಗ ಬಿಸಿಯೂಟದಿಂದ ದೂರವಿರುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ. ಹಗಲಿನಲ್ಲಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ. ಮನೆಯಿಂದ ಹೊರಡುವಾಗ ಛತ್ರಿ ಅಥವಾ ಕ್ಯಾಪ್ ಬಳಸಬೇಕು ಮತ್ತು ಚೆನ್ನಾಗಿ ನೀರು ಕುಡಿಯಬೇಕು.

ಹೀಟ್‌ ವೇವ್‌ನಿಂದ ಪಾರಾಗುವುದು ಹೇಗೆ?

– ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.

– ಮನೆಯಿಂದ ಹೊರಡುವಾಗ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಮತ್ತು ಆಗಾಗ್ಗೆ ನೀರು ಕುಡಿಯುತ್ತಿರಿ.

– ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿ ಬಳಸಿ.

– ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಿ.

– ಎಳನೀರು, ಮಜ್ಜಿಗೆ, ಹಣ್ಣಿನ ರಸದಂತಹ ದ್ರವ ಪದಾರ್ಥಗಳನ್ನು ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read