ಭಾರತದ ಅತ್ಯಂತ ಶ್ರೀಮಂತ ನಟಿ ಯಾರು ಗೊತ್ತಾ ? ದಂಗಾಗಿಸುವಂತಿದೆ ಆಸ್ತಿ ಮೌಲ್ಯ…!

ಬಾಲಿವುಡ್ ನಟಿಯರು ಸೌಂದರ್ಯದಲ್ಲಿ ಮಾತ್ರವಲ್ಲ ಶ್ರೀಮಂತಿಕೆಯಲ್ಲೂ ಮುಂದಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಸಿರೋ ಅನೇಕ ಬೆಡಗಿಯರು ಬಿಟೌನ್‌ನಲ್ಲಿದ್ದಾರೆ. ಹಿಂದಿ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿ ಯಾರಿರಬಹುದು ಹೇಳಿ ? ದೀಪಿಕಾ ಪಡುಕೋಣೆ, ಆಲಿಯಾ ಭಟ್‌ ಇವರ್ಯಾರೂ ಅಲ್ಲ. ಬಾಲಿವುಡ್ ನ ಅತ್ಯಂತ ಶ್ರೀಮಂತ ನಟಿಯ ನಿವ್ವಳ ಆಸ್ತಿ ಮೌಲ್ಯ ದೀಪಿಕಾ ಮತ್ತು ಆಲಿಯಾಗಿಂತ ಹೆಚ್ಚು.

ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಹೆಸರು ಬರುತ್ತದೆ. ಆದರೆ ಗಳಿಕೆಯ ವಿಷಯದಲ್ಲಿ, ಐಶ್ವರ್ಯಾ ರೈ ಬಚ್ಚನ್ ಈ ಇಬ್ಬರು ಸುಂದರಿಯರಿಗಿಂತ ಬಹಳ ಮುಂದಿದ್ದಾರೆ.

ಐಶ್ವರ್ಯಾ ರೈ ಭಾರತದ ಅತ್ಯಂತ ಶ್ರೀಮಂತ ನಟಿ. ವರದಿಯ ಪ್ರಕಾರ ಐಶ್ವರ್ಯಾ ರೈ ಅವರ ನಿವ್ವಳ ಮೌಲ್ಯ ಸುಮಾರು 776 ಕೋಟಿ ರೂಪಾಯಿ. ಮಾಜಿ ವಿಶ್ವ ಸುಂದರಿ ಐಶ್‌ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ.

ಐಶ್ವರ್ಯಾ ರೈ ಒಂದು ಚಿತ್ರಕ್ಕೆ 10 ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ವರ್ಷಕ್ಕೆ ಕಡಿಮೆ ಅಂದರೂ ಸಿನೆಮಾಗಳಿಂದಲೇ 80 ರಿಂದ 90 ಕೋಟಿ ರೂಪಾಯಿ ಗಳಿಸುತ್ತಿದ್ದರು. ಈ ಪಟ್ಟಿಯಲ್ಲಿ ಐಶ್ವರ್ಯಾ ರೈ ಬಚ್ಚನ್ ನಂತರ ಪ್ರಿಯಾಂಕಾ ಚೋಪ್ರಾ ಹೆಸರು ಎರಡನೇ ಸ್ಥಾನದಲ್ಲಿದೆ. ಅವರ ನಿವ್ವಳ ಆಸ್ತಿಯ ಮೌಲ್ಯ 620 ಕೋಟಿ ರೂಪಾಯಿ.

ಈ ಪಟ್ಟಿಯಲ್ಲಿ ಕರೀನಾ ಕಪೂರ್ ಖಾನ್ ಹೆಸರು ಮೂರನೇ ಸ್ಥಾನದಲ್ಲಿದೆ. ಅವರ ನಿವ್ವಳ ಆಸ್ತಿಯ ಮೌಲ್ಯ 517 ಕೋಟಿ ರೂಪಾಯಿ. ದೀಪಿಕಾ ಪಡುಕೋಣೆ 314 ಕೋಟಿ ರೂಪಾಯಿ ಆಸ್ತಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅನುಷ್ಕಾ ಶರ್ಮಾ ಅವರ ಹೆಸರು ಐದನೇ ಸ್ಥಾನದಲ್ಲಿದ್ದು, ಆಸ್ತಿ ಮೌಲ್ಯ ಸುಮಾರು 255 ಕೋಟಿ ರೂಪಾಯಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read