ಲಕ್ಷ್ಮಿ ಎಂಥಾ ಮನೆಯಲ್ಲಿ ಸದಾ ನೆಲೆಸುತ್ತಾಳೆ ಗೊತ್ತಾ…..?

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲಿ ಎಂದು ಎಲ್ಲರೂ ಬಯಸ್ತಾರೆ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿವಿಧ ಪೂಜೆಗಳನ್ನು ಮಾಡ್ತಾರೆ. ಆದ್ರೆ ಕೆಲವರ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಖುದ್ದು ಲಕ್ಷ್ಮಿಯೇ ಇಂದ್ರನಿಗೆ ಹೇಳಿದ್ದಾಳೆ.

ಅಸುರರ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಿ ಒಂದು ದಿನ ಇಂದ್ರನ ಮನೆಗೆ ಬರ್ತಾಳೆ. ನಿಮ್ಮ ಮನೆಯಲ್ಲಿ ನಾನು ವಾಸವಾಗ್ಲಾ ಎಂದು ಕೇಳುತ್ತಾಳೆ. ಆಗ ಇಂದ್ರ, ಲಕ್ಷ್ಮಿಗೆ ಅನುಮತಿ ನೀಡುತ್ತಾನೆ. ಜೊತೆಗೆ ಪ್ರತಿ ಬಾರಿ ನಾನು ಕರೆದರೂ ನೀನು ಏಕೆ ಇಲ್ಲಿಗೆ ಬರ್ತಾ ಇರಲಿಲ್ಲ. ಈಗ ಹೇಗೆ ಬಂದೆ ಎಂದು ಕೇಳುತ್ತಾನೆ. ಅಸುರರು ಅಧರ್ಮಿಗಳಾಗ್ತಿದ್ದಾರೆ ಹಾಗಾಗಿ ಅಲ್ಲಿಂದ ಇಲ್ಲಿಗೆ ಬಂದೆ ಎನ್ನುತ್ತಾಳಂತೆ ಲಕ್ಷ್ಮಿ.

ದ್ವೇಷ, ಕೋಪ, ಸೇಡು ತುಂಬಿರುವ ಮನೆ, ಮನದಲ್ಲಿ ಎಂದೂ ನೆಲೆಸುವುದಿಲ್ಲ ಎಂದು ಲಕ್ಷ್ಮಿ ಇಂದ್ರನಿಗೆ ಹೇಳುತ್ತಾಳೆ. ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ವಾಸಿಸುವುದಿಲ್ಲ. ವಿವೇಕ ಹಾಗೂ ಧರ್ಮದ ಬಗ್ಗೆ ಮಾತನಾಡದ, ಜ್ಞಾನಿಗಳ ಅಪಮಾನ ಮಾಡುವ ಜಾಗದಲ್ಲಿ ನೆಲೆ ನಿಲ್ಲುವುದಿಲ್ಲ. ಪಾಪ, ಅಧರ್ಮ, ಸ್ವಾರ್ಥ ತುಂಬಿರುವ ಮನೆಗೆ ಲಕ್ಷ್ಮಿ ಕಾಲಿಡುವುದಿಲ್ಲ. ಗುರು, ತಂದೆ-ತಾಯಿ ಹಿರಿಯರಿಗೆ ಗೌರವವಿಲ್ಲದ ಮನೆಯಲ್ಲಿ ನಾನಿರುವುದಿಲ್ಲ ಎಂದಿದ್ದಾಳೆ ಲಕ್ಷ್ಮಿ.

ಧರ್ಮವನ್ನು ನಂಬುವ, ಮನಸ್ಸು ಪವಿತ್ರವಾಗಿರುವ, ಎಲ್ಲರನ್ನೂ ಗೌರವಿಸುವ, ಕಪಟ, ನಾಟಕವಿಲ್ಲದ, ಬಡವರಿಗೆ ದಾನ- ಧರ್ಮ ಮಾಡುವವರ ಮನೆಯಲ್ಲಿ ತಾನು ಸದಾ ನೆಲೆಸಿರುವುದಾಗಿ ಲಕ್ಷ್ಮಿ ಹೇಳಿದ್ದಾಳೆ.  ಹಾಗೆ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಅಥವಾ ಭಗವಾನ್ ವಿಷ್ಣು ಹಾಗೂ ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮಿ ಫೋಟೋವನ್ನು ಪೂಜಿಸಿದ್ರೆ ಲಕ್ಷ್ಮಿ ಬಹು ಬೇಗ ಪ್ರಸನ್ನಳಾಗ್ತಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read