ಭಾರತದ ಅತ್ಯಂತ ದುಬಾರಿ ಮನೆಗಳು ಯಾವುವು ಗೊತ್ತಾ ? ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ !

ಭಾರತದಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಮನೆಗಳಿವೆ. ದೇಶದ ಅತ್ಯಂತ ದುಬಾರಿ ಮನೆ ಎಂದಾಗ ಮೊದಲು ನೆನಪಾಗೋದು ಹಿರಿಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಹೆಸರು. ಮುಖೇಶ್‌ ಅಂಬಾನಿ ಅವರ ನಿವಾಸ ಎಂಟಿಲಿಯಾ ಯಾವ ಅರಮನೆಗಿಂತ ಕಮ್ಮಿಯೇನಿಲ್ಲ.

ಮುಖೇಶ್‌ ಅಂಬಾನಿ ಅವರ ಮನೆಯನ್ನು 2008 ಮತ್ತು 2010ರ ನಡುವೆ ನಿರ್ಮಿಸಲಾಗಿದೆ. ಈ ಮನೆಯ ಬೆಲೆ 6,000 ದಿಂದ 12,000 ಕೋಟಿ ರೂಪಾಯಿ. ಐಷಾರಾಮಿ ಬದುಕಿಗೆ ಬೇಕಾದ ಎಲ್ಲಾ ಸೌಲಭ್ಯಗಳೂ ಇಲ್ಲಿವೆ.

ಇನ್ನು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾದ ಕುಮಾರ್ ಮಂಗಲಂ ಬಿರ್ಲಾ ಅವರ ನಿವಾಸ ಕೂಡ ಭಾರತದ ಟಾಪ್‌ 5 ದುಬಾರಿ ಮನೆಗಳಲ್ಲೊಂದು. ಮುಂಬೈನ ಜಟಿಯಾ ಹೌಸ್‌ನಲ್ಲಿ ಈ ಮನೆಯಿದೆ. ಸೀ ಫೇಸಿಂಗ್‌ ಕಟ್ಟಡವನ್ನು ಅವರು 425 ಕೋಟಿ ರೂಪಾಯಿಗೆ ಖರೀದಿಸಿದ್ದರು.

ಮುಖೇಶ್ ಅಂಬಾನಿಯವರ ಕಿರಿಯ ಸಹೋದರ ಅನಿಲ್ ಅಂಬಾನಿಯವರ ಮನೆ ಅಬೋಡ್ ಕೂಡ ಭಾರತದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಈ ಮನೆಯ ಬೆಲೆ 5,000 ಕೋಟಿ ರೂಪಾಯಿ ಅಂತಾ ಅಂದಾಜಿಸಲಾಗಿದೆ.

ಜಿಂದಾಲ್‌ ಹೌಸ್‌ ಸಹ ಅದ್ಧೂರಿಯಾಗಿದೆ. ಈ ಮನೆ ದೆಹಲಿಯ ಲುಟಿಯನ್ಸ್ ಹೌಸ್ ಬಳಿಯಿದೆ. ಇದರ ನಿರ್ಮಾಣಕ್ಕೆ ಸುಮಾರು 150 ಕೋಟಿ ರೂಪಾಯಿ ವೆಚ್ಚವಾಗಿದೆ.

ಸೈಫ್ ಅಲಿ ಖಾನ್ ಅವರ ಪೂರ್ವಜರ ಮನೆ ಪಟೌಡಿ ಹೌಸ್ ಸಹ ಈ ಲಿಸ್ಟ್‌ನಲ್ಲಿದೆ. ಇದು ಕೂಡ ಐಷಾರಾಮಿ ಮನೆಗಳಲ್ಲಿ ಒಂದಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಈ ಮನೆಯ ಬೆಲೆ 800 ಕೋಟಿ ರೂಪಾಯಿ ಎನ್ನಲಾಗ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read