ಮಂಗಳೂರಿನ ಪಣಂಬೂರು ಬೀಚ್ ನ ವೈಶಿಷ್ಟ್ಯ ಬಲ್ಲಿರಾ….!

ಮಂಗಳೂರಿನ ಬೀಚ್ ಗಳ ಪೈಕಿ ಪಣಂಬೂರು ಕಡಲ ತೀರವು ಅತಿ ಪ್ರಸಿದ್ದಿ ಹೊಂದಿದ್ದು, ದೇಶ – ವಿದೇಶಗಳ ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಕಡಲ ತೀರವು ಅರಬ್ಬೀ ಸಮುದ್ರದ ತೀರದಲ್ಲಿದೆ. ಇದು ಭಾರತದ ಸುರಕ್ಷಿತವಾದ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಕಡಲ ತೀರಗಳಲ್ಲಿ ಒಂದಾಗಿದೆ.

ಈ ಬೀಚ್ ಮಂಗಳೂರು ನಗರದಿಂದ 10 ಕಿ.ಮೀ. ಉತ್ತರಕ್ಕೆ ಪಣಂಬೂರು ಎಂಬ ಸ್ಥಳದಲ್ಲಿದೆ. ಸದ್ಯಕ್ಕೆ ಇದು ಖಾಸಗಿ ಉದ್ಯಮಿಗಳಿಂದ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ವಹಣೆಗೊಳ್ಳುತ್ತಿದೆ. ಇತರ ಆಕರ್ಷಣೆಗಳಲ್ಲಿ ಜೆಟ್ ಸ್ಕೈ ಸವಾರಿಗಳು, ಬೋಟಿಂಗ್, ಡಾಲ್ಫಿನ್ ವೀಕ್ಷಣೆ, ಆಹಾರ ಮಳಿಗೆಗಳು ಸೇರಿವೆ.

ಈ ಬೀಚ್ ಸ್ಥಳೀಯರಿಗೆ ಪಿಕ್ನಿಕ್ ತಾಣವಾಗಿದೆ ಮತ್ತು ಸೂರ್ಯಾಸ್ತದ ಅತ್ಯುತ್ತಮ ವೀಕ್ಷಣೆ ಇಲ್ಲಿಂದ ಸಾಧ್ಯ. ಬಂದರಿನಲ್ಲಿ ಸಮುದ್ರದಲ್ಲಿ ಲಂಗರು ಹಾಕಿದ ಹಡಗುಗಳನ್ನು ಬೀಚ್‌ ನಿಂದ ನೋಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read