ಫಿಶ್ ಆಯಿಲ್ ಸೇವನೆಯ ಪ್ರಯೋಜನ ಗೊತ್ತಾ….?

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ.

ಆರೋಗ್ಯ ವರ್ಧನೆಯೊಂದಿಗೆ ಸೌಂದರ್ಯ ರಕ್ಷಣೆಗೂ ಬಳಕೆಯಾಗುವ ಇದರಿಂದ ಕೂದಲನ್ನು ಬೆಳೆಸಬಹುದು. ಹೇಗೆಂದಿರಾ?

ಕೂದಲಿನ ಬೆಳವಣಿಗೆಗೆ ಬೇಕಾಗುವ ಒಮೆಗಾ 3 ಕೊಬ್ಬಿನಂಶ ಮೀನಿನೆಣ್ಣೆಯಲ್ಲಿದೆಯಂತೆ. ಇದರಿಂದ ಕೂದಲಿನ ಫಾಲಿಸೆಲ್ಸ್ ಗಳಿಗೆ ಪೋಷಕಾಂಶ ದೊರೆತು ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಬುರುಡೆಯ ರಕ್ತಸಂಚಾರಕ್ಕೂ ಅನುವು ಮಾಡಿಕೊಡುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಅವಕಾಶ ಸಿಗುತ್ತದೆ.

ನೀವು ಮಾಂಸಾಹಾರಿಗಳಾಗಿದ್ದರೆ ಕೆಲವು ಪ್ರಕಾರದ ಮೀನುಗಳನ್ನು ತಿಂದರೂ ಸಾಕು. ಅವುಗಳಲ್ಲಿರುವ ಸತ್ವವೇ ನಿಮ್ಮ ದೇಹಕ್ಕೆ ಸಾಕಾಗುತ್ತದೆ. ಮಧುಮೇಹಿ ಅಥವಾ ಇತರ ಕಾಯಿಲೆಗಳಿಂದ ಬಳಲುತ್ತಿದ್ದರೆ ಫಿಶ್ ಆಯಿಲ್ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಅವರು ಹೇಳಿದಷ್ಟೇ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

ಫಿಶ್ ಆಯಿಲ್ ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಹೊಸದಾಗಿ ಬಳಸುವಾಗ ತಲೆನೋವು, ವಾಂತಿಯಂಥ ಲಕ್ಷಣಗಳು ಕಂಡು ಬಂದಾವು. ತೇಗಿದಾಗ ಬಾಯಿಯಿಂದ ಮೀನಿನ ವಾಸನೆಯೇ ಹೊರಬಂದೀತು. ಅದಕ್ಕಾಗಿ ನೈಸರ್ಗಿಕ ಮೌತ್ ವಾಶ್ ಬಳಸಿ. ಉದಾಹರಣೆಗೆ ನಾಲ್ಕು ಕಾಳು ಸೋಂಪು ಬಾಯಿಯಲ್ಲಿ ಹಾಕಿ ಜಗಿಯಿರಿ.

ಬಿಪಿ ರೋಗಿಗಳು ಮತ್ತು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿರುವವರು ಇದನ್ನು ಸೇವಿಸದಿರುವುದು ಒಳ್ಳೆಯದು. ಇದನ್ನು ಆಲಿವ್ ಎಣ್ಣೆ ಜೊತೆ ಬೆರೆಸಿ ತಲೆಗೆ ಹಚ್ಚಿಕೊಂಡರೆ ಕೂದಲು ದಪ್ಪವಾಗಿ ಬೆಳೆಯುತ್ತದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read