ನಿಮಗೆ ಗೊತ್ತಾ ʼಈರುಳ್ಳಿʼಯ ಹತ್ತು ಹಲವು ಉಪಯೋಗಗಳು

ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶ ಹೆಚ್ಚಿಸುವ ಈರುಳ್ಳಿಯಿಂದ ಇನ್ನಿತರ ಅನೇಕ ಉಪಯೋಗಗಳಿವೆ. ಇದನ್ನು ಅಡುಗೆ ಮನೆಯ ವಿವಿಧ ಪರಿಕರಗಳ ಸ್ವಚ್ಛತೆಗೂ ಬಳಸಬಹುದು. ಇಂಥ ಕೆಲವು ಕ್ಲೀನಿಂಗ್‌ ವಿಧಾನ ಇಲ್ಲಿದೆ.

* ತುಕ್ಕು ಹಿಡಿದಿರುವ ಚಾಕುಗಳಿಂದ ದೊಡ್ಡ ಈರುಳ್ಳಿಯನ್ನು ಹೆಚ್ಚಿದರೆ ಅದರಲ್ಲಿರುವ ತುಕ್ಕು ತಕ್ಷಣಕ್ಕೆ ಹೋಗುತ್ತದೆ.

* ಮನೆಯಲ್ಲಿ ಹೊಸ ಪೇಂಟ್‌ನ ವಾಸನೆ ಬರುತ್ತಿದ್ದರೆ, ಈರುಳ್ಳಿಯ ಸ್ಲೈಸ್‌ಗಳಿಗೆ ಸ್ವಲ್ಪ ನೀರು ಚಿಮುಕಿಸಿ ರಾತ್ರಿಯಿಡೀ ಇಟ್ಟರೆ ಅದು ವಾಸನೆಯನ್ನು ಹೀರಿಕೊಳ್ಳುತ್ತದೆ.

* ಕೊಳೆಯಾಗಿರುವ ಗ್ರಿಲ್‌ ಅನ್ನು ಈರುಳ್ಳಿಯ ಹೋಳುಗಳಿಂದ ಚೆನ್ನಾಗಿ ಸ್ವಚ್ಛಗೊಳಿಸಬಹುದು.

* ಹೊಳಪು ಕಳೆದುಕೊಂಡಿರುವ ಲೋಹದ ಪಾತ್ರೆಗಳನ್ನು ಈರುಳ್ಳಿ ನೆನೆಸಿದ ನೀರಿನಿಂದ ಒರೆಸಿದರೆ ಪಾತ್ರೆಗೆ ಹೊಸ ಹೊಳಪು ಬರುತ್ತದೆ.

* ಅಡುಗೆ ಮನೆಯಲ್ಲಿ ಸೀದು ಹೋದ ಅನ್ನದ ವಾಸನೆ ಬರುತ್ತಿದ್ದರೆ, ಸ್ಟವ್‌ ಪಕ್ಕ ಅರ್ಧ ಹೋಳು ಈರುಳ್ಳಿ ಇಡಿ. ಇದು ವಾಸನೆಯನ್ನು ಹೀರಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read