ನಿಮ್ಮ ಉಡುಪುಗಳಿಗೆ ಸೂಕ್ತ ಪಾದರಕ್ಷೆ ಆಯ್ಕೆ ಮಾಡುವುದು ಹೇಗೆ ಗೊತ್ತಾ….?

ಎಷ್ಟು ಜೊತೆ ಚಪ್ಪಲಿಗಳಿದ್ದರೂ ಬಟ್ಟೆಗೆ ಹೊಂದುವ ಫುಟ್ ವೇರ್ ಯಾವುದು ಧರಿಸುವುದು ಎಂದು ಲೆಕ್ಕಾಚಾರ ಹಾಕುವುದರಲ್ಲೇ ಸಮಯ ಕಳೆದಿರುತ್ತದೆಯೇ, ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಉಡುಪಿಗೆ ಸರಿಹೊಂದುವ ಚಪ್ಪಲಿ ಆಯ್ಕೆ ಈಗ ಬಲು ಸುಲಭ.

ಸ್ಟೂಲ್ ಹೀಲ್ಸ್ ಚಪ್ಪಲಿಗಳು ಮೇಲೆ ಅಗಲವಾಗಿ ಕೆಳಗೆ ತೆಳುವಾಗಿಯೂ ಕಾಣಿಸಿಕೊಳ್ಳುತ್ತವೆ. ಇವು ಕ್ಯಾಶುವಲ್ ವೇರ್ ಮತ್ತು ಸ್ಟೈಲಿಶ್ ಔಟ್ ಫಿಟ್ ಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತವೆ.

ಚೂಪು ಮೊನೆಯ ಹೀಲ್ಸ್ ಗಳು ಅಥವಾ ಪೆನ್ಸಿಲ್ ಹಿಲ್ಸ್ ಗಳು ನಿಮಗೆ ಗ್ಲಾಮರಸ್ ಲುಕ್ ನೀಡುತ್ತವೆ. ನಡಿಗೆಯನ್ನೂ ಚಂದಗೊಳಿಸುತ್ತವೆ. ಸಂಜೆಯ ಪಾರ್ಟಿಗಳಿಗೆ ಧರಿಸುವ ಗೌನ್ ಅಥವಾ ಸ್ಲಿಮ್ ಫಿಟ್ ಜೀನ್ಸ್ ಮತ್ತು ಫಿಟ್ ಆಗಿರುವ ಉಡುಪುಗಳಿಗೆ ಈ ಪಾದರಕ್ಷೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ.

ವಿನ್ಯಾಸಕ್ಕಿಂತ ಪಾದರಕ್ಷೆ ಕಂಫರ್ಟ್ ಆಗಿರುವುದು ಮುಖ್ಯ ಎನ್ನುವವರು ಲೂಫರ್ಸ್ ಆಯ್ಕೆ ಮಾಡಬಹುದು. ಇದು ಜೀನ್ಸ್, ಫಾರ್ಮಲ್ ಮಾತ್ರವಲ್ಲ ಲಾಂಗ್ ಸ್ಕರ್ಟ್ ಗೂ ಹೊಂದಿಕೊಳ್ಳುತ್ತದೆ. ಇಡೀ ದಿನ ನಿಮ್ಮ ಕಾಲಿನಲ್ಲಿದ್ದರೂ ಪಾದವನ್ನು ಫ್ರೆಶ್ ಆಗಿಯೇ ಇಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read