ʼಸ್ಪ್ರಿಂಗ್ ಆನಿಯನ್ʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…..?

ಈರುಳ್ಳಿ ಇಲ್ಲದೆ ಹೋದರೆ ಅಡುಗೆ ಸಂಪೂರ್ಣವಾಗುವುದಿಲ್ಲ. ಹಾಗೇ ಈರುಳ್ಳಿ ಹೂವನ್ನು ಫ್ರೈಡ್ ರೈಸ್, ಸಲಾಡ್ ಗಳಲ್ಲಿ ಹೆಚ್ಚು ಉಪಯೋಗಿಸುವುದನ್ನು ನೋಡಿದ್ದೇವೆ.

ಅಲಂಕಾರಕ್ಕೆ ಬಳಸುವ ಈ ಸ್ಪ್ರಿಂಗ್ ಆನಿಯನ್ ಪ್ರಯೋಜನ ತಿಳಿದರೆ ನಿತ್ಯವೂ ಇದನ್ನು ಸೇವಿಸುತ್ತೇವೆ.

* ಈರುಳ್ಳಿಗೆ ಹೋಲಿಸಿದರೆ ಕಾಂಡಗಳಲ್ಲಿ ಸಲ್ಫರ್ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ಪ್ರಿಂಗ್ ಆನಿಯನ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ರಕ್ತಹೀನತೆ ನಿಯಂತ್ರಣಕ್ಕೆ ಬರುತ್ತದೆ.

* ಶೀತ, ಕೆಮ್ಮಿನಿಂದ ಬಳಲುವವರು ಸೂಪ್ ನಲ್ಲಿ ಈ ಕಾಂಡಗಳನ್ನು ಸಣ್ಣದಾಗಿ ಕಟ್ ಮಾಡಿ ಹಾಕಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

* ಹಸಿ ಕಾಂಡಗಳ ರಸವನ್ನು ತೆಗೆದು ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪದಲ್ಲಿ ಕಲಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

* ಸ್ಪ್ರಿಂಗ್ ಆನಿಯನ್ ನಲ್ಲಿರುವ ಪೆಕ್ಟಿನ್ ಅನ್ನುವ ಪದಾರ್ಥ ಕ್ಯಾನ್ಸರ್ ಬರದಂತೆ ತಡೆಯಲು ನೆರವಾಗುತ್ತದೆ.

* ಪೈಲ್ಸ್ ಸಮಸ್ಯೆಯಿಂದ ಬಳಲುವವರು ಮೊಸರಿನಲ್ಲಿ ಸ್ಪ್ರಿಂಗ್ ಈರುಳ್ಳಿಯನ್ನು ಹಾಕಿ ಹಸಿಯಾಗಿ ತಿಂದರೆ ಒಳ್ಳೆಯದು. ಇದರಿಂದ ಪೈಲ್ಸ್ ನಿಂದ ಬರುವ ನೋವು, ಊತ ಕಡಿಮೆಯಾಗುತ್ತದೆ.

* ಇದನ್ನು ಬೇಯಿಸುವಾಗ ಕೆಟ್ಟ ವಾಸನೆ ಬರುತ್ತದೆ ಎನ್ನುವವರು ಸ್ಪ್ರಿಂಗ್ ಆನಿಯನ್ ನನ್ನು ಸೀಫುಡ್ ಗಳಲ್ಲಿ ಬಳಸಿ ಸೇವಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read