ʼಕಪ್ಪು ಎಳ್ಳುʼ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……?

ಎಳ್ಳಿನಲ್ಲಿ ಕಪ್ಪು ಹಾಗೂ ಬಿಳಿ ಎಂಬ ಎರಡು ವಿಧಗಳಿವೆ. ಆದರೆ ಹೆಚ್ಚಿನ ಔಷಧೀಯ ಗುಣಗಳಿರುವುದು ಕಪ್ಪು ಎಳ್ಳಿನಲ್ಲೇ ಎಂಬುದು ನಿಮಗೆ ನೆನಪಿರಲಿ.

ಈ ಎಳ್ಳಿನಲ್ಲಿ ಕ್ಯಾಲ್ಸಿಯಂ ಗುಣ ಹೇರಳವಾಗಿದ್ದು ನೆನೆಸಿ ರುಬ್ಬಿ ಸೋಸಿ ತಯಾರಿಸುವ ಎಳ್ಳಿನ ಜ್ಯೂಸ್ ಹಲವು ರೀತಿಯಿಂದ ನಮ್ಮ ಆರೋಗ್ಯ ಭಾಗ್ಯವನ್ನು ಹೆಚ್ಚಿಸುತ್ತದೆ.

ಐಸ್ ಕ್ರೀಂ, ಯೋಗರ್ಟ್ ತಯಾರಿ ವೇಳೆ ಹಸಿ ಎಳ್ಳನ್ನು ಬಳಸುವುದರಿಂದ ನಿಮ್ಮ ತಿನಿಸನ್ನು ಪ್ರೊಟೀನ್ ಭರಿತವಾಗಿಸಬಹುದು. ಇದರ ಸೇವನೆಯಿಂದ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಆರೋಗ್ಯಕರ ಫ್ಯಾಟ್ ಅಡಗಿರುತ್ತದೆ. ಕ್ಯಾಲ್ಸಿಯಂನೊಂದಿಗೆ ಫೈಬರ್, ಮೆಗ್ನೀಸಿಯಂಗಳೂ ದೇಹಕ್ಕೆ ಲಭ್ಯವಾಗುತ್ತವೆ.

ತಲೆಕೂದಲು ಬೆಳ್ಳಗಾಗುವುದನ್ನು ಕಪ್ಪು ಎಳ್ಳು ತಡೆಯುತ್ತದೆ. ನೆನಪಿನ ಶಕ್ತಿಯ ಸಮಸ್ಯೆಗಳನ್ನು ದೂರಮಾಡುತ್ತದೆ. ಕ್ಯಾನ್ಸರ್ ಬರದಂತೆ ತಡೆಯುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಮಲಬದ್ಧತೆ, ಅಜೀರ್ಣ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಎಲುಬು ಸವೆತದಂಥ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read