ನಿಮ್ಮ ಕೈ ಮೇಲೂ ಈ ಗುರುತಿದ್ಯಾ….?

ಪ್ರಪಂಚದಾದ್ಯಂತ ಬಹಳಷ್ಟು ಜನರು ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತ ರೇಖಾ ಶಾಸ್ತ್ರವನ್ನು ನಂಬುತ್ತಾರೆ. ತಜ್ಞರು ಹಸ್ತ ನೋಡಿ ಜನರ ಭವಿಷ್ಯ ಹೇಳ್ತಾರೆ. ಕೈನಲ್ಲಿರುವ ಪ್ರತಿಯೊಂದು ರೇಖೆ ನಮ್ಮ ಜೀವನಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಸಂಗತಿಯನ್ನು ಹೇಳುತ್ತದೆಯಂತೆ.

ಕೈನಲ್ಲಿರುವ ಪ್ರತಿಯೊಂದು ರೇಖೆಗೂ ತನ್ನದೇ ಆದ ವಿಶೇಷ ಮಹತ್ವವಿದೆ. ಕೆಲವೊಂದು ರೇಖೆಗಳು ಶುಭ ಸಂಕೇತಗಳನ್ನು ನೀಡುತ್ತವೆ. ನಿಮ್ಮ ಕೈಮೇಲೆ ಕಾಣುವ ` M’ ಗುರುತು ಕೂಡ ಶುಭಕರ.

ಹಸ್ತ ರೇಖಾ ಶಾಸ್ತ್ರದ ಪ್ರಕಾರ, ಕೈ ಮೇಲೆ ` M’ ಗುರುತಿರುವ ಜನರು ಬಹಳ ಭಾಗ್ಯಶಾಲಿಗಳಾಗಿರುತ್ತಾರಂತೆ. ಅದೃಷ್ಟ ಅವ್ರನ್ನು ಅರಸಿ ಬರುತ್ತದೆ. ಇಂಥ ವ್ಯಕ್ತಿ ತನ್ನಿಡೀ ಜೀವನವನ್ನು ಐಷಾರಾಮಿಯಾಗಿ ಕಳೆಯುತ್ತಾನಂತೆ.

ರಾಜಕೀಯದಲ್ಲಿ ಸಫಲತೆ ಪ್ರಾಪ್ತಿಯಾಗುತ್ತದೆ. ‘M’ ರೇಖೆ ಹೊಂದಿರುವ ವ್ಯಕ್ತಿಗಳು ಕಷ್ಟದ ಕೆಲಸವನ್ನು ಕೂಡ ಸುಲಭವಾಗಿ ಮಾಡಿ ಮುಗಿಸುತ್ತಾರಂತೆ.

ಮಾತಿನಿಂದ ಇತರರನ್ನು ಒಲಿಸಿಕೊಳ್ಳುವ ಶಕ್ತಿ ಇವರಿಗಿರುತ್ತದೆ. ತಮ್ಮ ಕೌಶಲ್ಯದ ಮೂಲಕ ಬೇರೆಯವರಿಂದ ಸುಲಭವಾಗಿ ಕೆಲಸ ತೆಗೆದುಕೊಳ್ತಾರೆ. ಪತ್ರಿಕೋದ್ಯಮ ಹಾಗೂ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಇವ್ರು ಹೆಚ್ಚು ಯಶಸ್ಸು ಗಳಿಸುತ್ತಾರಂತೆ. ಹೆಚ್ಚು ಬುದ್ದಿವಂತ ಎಂಬ ಪಟ್ಟ ಗಿಟ್ಟಿಸಿಕೊಳ್ತಾರೆ. ಸದಾ ಕುಟುಂಬದ ಜೊತೆಗಿರುವ ವ್ಯಕ್ತಿಗಳು ಎಲ್ಲರ ಪ್ರೀತಿ ಗಳಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read