ನಿಮ್ಮ ಗಾರ್ಡನ್ ನಲ್ಲೂ ಇವೆಯಾ ಈ ಗಿಡಗಳು….?

 

ಗಾರ್ಡನಿಂಗ್ ಇಷ್ಟ ಪಡುವವರೇ ಹೆಚ್ಚು. ಸಮಯದ ಅಭಾವ ಹಾಗೂ ಮಾಹಿತಿಯ ಕೊರತೆಯಿಂದಾಗಿ ನಿಮ್ಮ ಗಾರ್ಡನ್ ನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದು ನಿಮಗೆ ತಿಳಿಯದೇ ಹೋಗಿರಬಹುದು.‌ ಹೂವಿನ ಗಿಡ, ಶೋ ಪ್ಲಾಂಟ್‌ ಜೊತೆಗೆ ಸುಲಭವಾಗಿ ಬಹುಬೇಗ ಬೆಳೆಯಬಹುದಾದ ಕೆಲವು ತರಕಾರಿಗಳು ಇಲ್ಲಿವೆ.

ಮೂಲಂಗಿ ಬೀಜಗಳನ್ನು ಹಾಕಿದ ನಾಲ್ಕು ವಾರದಲ್ಲಿ ಇದು ಕೊಯ್ಲಿಗೆ ಲಭ್ಯವಾಗುತ್ತದೆ. ಇದಕ್ಕೆ ಹೆಚ್ಚು ಜಾಗದ ಅವಶ್ಯಕತೆಯೂ ಇಲ್ಲ. ಮನೆಯ ಹೂದಾನಿಗಳಲ್ಲೂ ಇದನ್ನು ಬಿತ್ತಬಹುದು. ಬೀಜ ಹಾಕಿದ ನಾಲ್ಕು ದಿನದಲ್ಲೇ ಮೊಳಕೆ ಬರುತ್ತದೆ.

 ಮೂಲಂಗಿಯಂತೆ ಕ್ಯಾರೆಟ್ ಕೂಡಾ ಬಹುಬೇಗ ಬೆಳೆಯಬಹುದು. ಸಣ್ಣ ಕ್ಯಾರೆಟ್ ಆರು ವಾರಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದನ್ನು ಕುಂಡಗಳಲ್ಲಿ ಹಾಕಿ ಮೇಲ್ಭಾಗಕ್ಕೆ ಗೊಬ್ಬರ ಮಿಶ್ರಿತ ತೆಳು ಮಣ್ಣು ಸೇರಿಸಿ. ಆಗಾಗ ನೀರು ಹಾಕುತ್ತಿರಿ. ಹೀಗೆ ಮಾಡಿದರೆ ಒಂದೂವರೆ ತಿಂಗಳಿನಲ್ಲಿ ಕ್ಯಾರೆಟ್ ಕೊಯ್ಲಿಗೆ ಬರುತ್ತದೆ.

ಅದೇ ರೀತಿ ಪಾಲಕ್ ಸೊಪ್ಪು ಕೂಡಾ ಬಿತ್ತನೆ ಮಾಡಿದ ತಿಂಗಳೊಳಗೆ ಕೊಯ್ಯಬಹುದು. ಪಾಲಕ್ ಸೊಪ್ಪು ದೇಹಕ್ಕೆ ಆರೋಗ್ಯಕರ ಮಾತ್ರವಲ್ಲ ಹಿಮೋಗ್ಲೋಬಿನ್ ಕೊರತೆಯಂಥ ಸಮಸ್ಯೆಯನ್ನೂ ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read