ಊಟದ ಬಳಿಕ ಸಿಗರೇಟ್ ಸೇದುವ ಅಭ್ಯಾವಿದೆಯಾ….? ಹಾಗಿದ್ರೆ ಓದಿ

ಊಟದ ಬಳಿಕ ಸಿಗರೇಟ್ ಸೇದುವವರ ಸಂಖ್ಯೆ ದೇಶದಲ್ಲಿ ಅಧಿಕವಿದೆ. ಊಟದ ನಂತರ ಸೇದುವ ಸಿಗರೇಟ್ ಹತ್ತು ಸಿಗರೇಟ್ ಸೇವನೆಗೆ ಸಮವೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಸಿಗರೇಟ್ ಬಿಡುವ ವ್ಯಕ್ತಿಗಳು ಸಹ ಊಟ ಆದ ಮೇಲೆ ಒಂದು ಸೇದಿ ಬಿಟ್ಟುಬಿಡುವ ಎಂದು ನಿರ್ಧರಿಸಿ ಸೇದುವವರಿದ್ದಾರೆ. ಅವರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.

ನೀವು ಬಾಯಿಗೆ ಆಹಾರ ಹಾಕುವುದರಿಂದ ಹಿಡಿದು ಪಚನ ಕ್ರಿಯೆ ನಡೆಯುವರೆಗೆ ಸುಮಾರು ಸಮಯ ತೆಗೆದುಕೊಳ್ಳುತ್ತದೆ. ಆಹಾರ ಸಾಮಾನ್ಯವಾಗಿ ನಿಮ್ಮ ಹೊಟ್ಟೆಯಲ್ಲಿ 4 ಗಂಟೆಯವರೆಗೆ ಇರುತ್ತದೆ.

ಸಣ್ಣ ಕರುಳಿನಲ್ಲಿ ಅದು 3-4 ಗಂಟೆಯವರೆಗೆ ಇರುತ್ತದೆ. ಪಚನಕ್ರಿಯೆಯ ಸಂದರ್ಭದಲ್ಲಿ ದೇಹ ಎಲ್ಲವನ್ನ ಹೀರಿಕೊಳ್ಳುತ್ತದೆ. ಈ ಸಮಯದಲ್ಲಿ ಸಿಗರೇಟ್ ಸೇದುವುದರಿಂದ ನಿಕೋಟಿನ್ ಒಳಗೆ ಸೇರಿಕೊಂಡು ರಕ್ತಕ್ಕೆ ಸೇರ್ಪಡೆಯಾಗುತ್ತದೆ. ಇದರಿಂದ ಕರಳು ಹಾಗೂ ದೇಹದ ಇತರೆ ಅಂಗಾಂಗಗಳು ತೊಂದರೆಗೊಳಗಾಗುತ್ತವೆ. ಹೀಗಾಗಿ ವಿಜ್ಞಾನಿಗಳು ಊಟ ಮಾಡಿದ ನಂತರ ಸೇದುವ ಒಂದು ಸಿಗರೇಟು ಹತ್ತು ಸಿಗರೇಟು ಸೇದುವುದಕ್ಕಿಂತ ಅಪಾಯಕಾರಿ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read