ಸಾಮಾನ್ಯವಾಗಿ ಎಲ್ಲರೂ ಬಿಸಿಯಾದ ಕಾಫಿ, ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದ್ರೆ ಕೆಲವರು ವಿಪರೀತಿ ಬಿಸಿ ಬಿಸಿ ಪಾನೀಯ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು. ಅಧ್ಯಯನವೊಂದರಲ್ಲಿ ಇದು ಬಹಿರಂಗವಾಗಿದೆ. ಪ್ರತಿದಿನ 60 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನದ ಚಹಾ, ಕಾಫಿ ಅಥವಾ ಇತರ ಬಿಸಿ ಪಾನೀಯಗಳನ್ನು ಕುಡಿಯುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಪ್ರತಿದಿನ 700 ಮಿಲಿಗಿಂತ ಹೆಚ್ಚು ಬಿಸಿ ಚಹಾ, ಕಾಫಿ ಅಥವಾ ಯಾವುದೇ ಇತರ ಪಾನೀಯವನ್ನು ಕುಡಿಯುವುದರಿಂದ ಅನ್ನನಾಳದ ಕ್ಯಾನ್ಸರ್ ಅಪಾಯ 90 ಪ್ರತಿಶತದಷ್ಟು ಹೆಚ್ಚಾಗಬಹುದು. ಆಹಾರ ಪೈಪ್‌ನಲ್ಲಿ ಅಸಹಜ ಜೀವಕೋಶಗಳು ಅನಿಯಂತ್ರಿತ ರೀತಿಯಲ್ಲಿ ಬೆಳೆಯಲು ಪ್ರಾರಂಭಿಸಿದಾಗ ಅನ್ನನಾಳದ ಕ್ಯಾನ್ಸರ್ ಸಂಭವಿಸುತ್ತದೆ.
ನಿಮ್ಮ ಟೇಸ್ಟ್ ಬಡ್ (ನಾಲಿಗೆಯ ಕೋಶ) ಕೂಡ ಹೆಚ್ಚು ಬಿಸಿ ಪಾನೀಯಗಳನ್ನು ಸೇವಿಸುವುದರಿಂದ ಕೆಟ್ಟ ಪರಿಣಾಮ ಬೀರಬಹುದು. ನಿಯಮಿತವಾಗಿ ಬಿಸಿ ಪದಾರ್ಥಗಳನ್ನು ಸೇವಿಸುವುದರಿಂದ ನಾಲಿಗೆ ಸುಟ್ಟು ಹೋಗಬಹುದು.
ಅಷ್ಟೇ ಅಲ್ಲ ಇದು ತುಟಿಗಳ ಮೇಲೂ ಪರಿಣಾಮ ಬೀರುತ್ತದೆ. ಅನೇಕ ಸಂದರ್ಭಗಳಲ್ಲಿ, ಬಿಸಿ ವಸ್ತುಗಳ ಸೇವನೆಯು ತುಟಿಗಳನ್ನು ಸುಡುತ್ತದೆ. ಇದಲ್ಲದೇ ಎದೆಯುರಿ ಸಮಸ್ಯೆಯೂ ಬರಬಹುದು. ಅಧ್ಯಯನವು ಪ್ರತಿದಿನ 700 ಮಿಲಿಗಿಂತ ಅತಿಯಾದ ಬಿಸಿ ಚಹಾ ಅಥವಾ ಇತರ ಪಾನೀಯ ಸೇವಿಸುವವರಿಗೆ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯವು 90 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಕಂಡುಹಿಡಿದಿದೆ.
ಅನ್ನನಾಳದಲ್ಲಿ ಗಡ್ಡೆ ಬೆಳೆದಾಗ ಅಥವಾ ಅನ್ನನಾಳದ ಒಳಪದರದ ಜೀವಕೋಶಗಳು ಬದಲಾದಾಗ ಅನ್ನನಾಳದ ಕ್ಯಾನ್ಸರ್ ಸಂಭವಿಸುತ್ತದೆ. ದೀರ್ಘಕಾಲದ ಕೆಮ್ಮು, ಅಜೀರ್ಣ ಅಥವಾ ಎದೆಯುರಿ, ತೂಕ ನಷ್ಟ, ಹಸಿವಾಗದೇ ಇರುವುದು, ಅನ್ನನಾಳದಲ್ಲಿ ರಕ್ತಸ್ರಾವ ಇವೆಲ್ಲವೂ ಅನ್ನನಾಳದ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು.