ಕುಳಿತಲ್ಲೇ ಕಾಲು ಅಲ್ಲಾಡಿಸುವ ಅಭ್ಯಾಸ ನಿಮಗಿದೆಯಾ….? ಎಚ್ಚರ….!

ಸುಮ್ಮನೆ ಕುಳಿತಿರುವಾಗ ನಿಮಗೆ ಕಾಲನ್ನ ಅಲ್ಲಾಡಿಸುವ ಅಭ್ಯಾಸ ಇದೆ ಅಂದರೆ ಹುಷಾರಾಗಿರಿ. ಯಾಕಂದ್ರೆ ಇದು ಆತಂಕದ, ಕಳವಳವನ್ನ ಉಂಟು ಮಾಡುವ ಸಿಂಡ್ರೋಮ್​ ಆಗಿದೆ.

ಈ ಅಭ್ಯಾಸ ಶುರುವಾಗೋಕೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶದ ಕೊರತೆ.

ಈ ಸಮಸ್ಯೆ 10 ಪ್ರತಿಶತ ಜನರಲ್ಲಿ ಕಂಡು ಬರುತ್ತೆ. ಅಲ್ಲದೇ ಬಹುತೇಕ 35 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಕಾಣೋದು ತುಂಬಾನೇ ಹೆಚ್ಚು.

ಏನಿದು ಸಮಸ್ಯೆ…?

ಇದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಹಾರ್ಮೋನ್​ನ ಅಸಮತೋಲದಿಂದಾಗಿ ವ್ಯಕ್ತಿಗೆ ಪದೇ ಪದೇ ಕಾಲನ್ನ ಅಲುಗಾಡಿಸಬೇಕು ಎಂದೆನಿಸುತ್ತೆ. ಈ ಸಮಸ್ಯೆಯನ್ನ ನಿದ್ರಾಹೀನತೆಯ ಸಮಸ್ಯೆಗೂ ಸೇರಿಸಬಹುದು. ಯಾಕಂದ್ರ ಯಾವ ವ್ಯಕ್ತಿಯು ಸರಿಯಾಗಿ ನಿದ್ದೆ ಮಾಡೋದಿಲ್ವೋ ಅಂತವರಲ್ಲಿ ಈ ಅಭ್ಯಾಸ ಕಾಣಿಸೋದು ಜಾಸ್ತಿ.

ಈ ಸಮಸ್ಯೆಯನ್ನ ಹೋಗಲಾಡಿಸೋಕೆ ನೀವು ಕಬ್ಬಿಣಾಂಶದ ಮಾತ್ರೆಗಳನ್ನ ಸೇವನೆ ಮಾಡಬಹುದು. ಅಲ್ಲದೇ ನಿದ್ದೆ ಸರಿಯಾಗೋಕೆ ಮಾತ್ರೆ ಸೇವಿಸಿದ್ರೂ ಈ ಸಮಸ್ಯೆ ಕಡಿಮೆಯಾಗಲಿದೆ.

ಇದರ ಜೊತೆಯಲ್ಲಿ ಕಬ್ಬಿಣಾಂಶ ಅಗಾಧ ಪ್ರಮಾಣದಲ್ಲಿರುವ ಬಾಳೆಹಣ್ಣು, ಬಸಳೆ ಸೊಪ್ಪು, ಪಾಲಾಕ್​ ಸೊಪ್ಪು, ಬೀಟ್​ರೂಟ್​ಗಳನ್ನ ಹೆಚ್ಚಾಗಿ ಸೇವಿಸಿ. ರಾತ್ರಿ ಹೊತ್ತು ಚಹ ಹಾಗೂ ಕಾಫಿ ಕುಡಿಯುವ ಅಭ್ಯಾಸ ಬಿಟ್ಟು ಬಿಡಿ. ಮಲಗುವ ವೇಳೆಯಲ್ಲಿ ಟಿವಿ, ಮೊಬೈಲ್​ ನೋಡುವ ಅಭ್ಯಾಸವನ್ನೂ ಇಟ್ಟುಕೊಳ್ಳಬೇಡಿ. ಧೂಮಪಾನ ಹಾಗೂ ಮದ್ಯಪಾನವನ್ನೂ ತ್ಯಜಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read