ನಾಯಿ ಸಾಕಿದ್ದೀರಾ…..? ಹೀಗಿರಲಿ ಅವುಗಳ ಲಾಲನೆ – ಪಾಲನೆ

ಮನುಷ್ಯನ ಜೊತೆ ಅತ್ಯಂತ ಹೆಚ್ಚಿನ ಒಡನಾಟ, ಆಪ್ತತೆಯಿಂದ ಬೆಳೆಯುವ ಪ್ರಾಣಿಗಳು ಎಂದರೆ ಅದು ಶ್ವಾನ. ನಗರದಲ್ಲಿ ಕೂಡ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಯಿ ಸಾಕುತ್ತಾರೆ.

ನಾಯಿ ಸಾಕುವಾಗ ಕೆಲವೊಂದು ಎಚ್ಚರಿಕೆ ಅಗತ್ಯ. ಅವುಗಳ ಲಾಲನೆ ಪಾಲನೆ ಕುರಿತಂತೆ ಕೆಲವೊಂದು ಟಿಪ್ಸ್ ಇಲ್ಲಿದೆ.

* ನಾಯಿಗೆ ಎಣ್ಣೆ ಪದಾರ್ಥ ನೀಡಬೇಡಿ. ನಾಯಿಗಳನ್ನು ಸಾಕುವಾಗ ಅವುಗಳ ಆಹಾರ ಪದ್ಧತಿಯ ಮೇಲೆ ಸ್ವಲ್ಪ ಗಮನ ನೀಡಬೇಕು. ಇಲ್ಲವಾದರೆ ಅಪಾಯ ತಪ್ಪಿದ್ದಲ್ಲ.

* ನಾಯಿಗಳಿಗೆ ಯಾವುದೇ ಕಾರಣಕ್ಕೂ ಎಣ್ಣೆಯ ಅಂಶವಿರುವ ಆಹಾರ ನೀಡಬಾರದು. ಉದಾಹರಣೆಗೆ ಚಿತ್ರಾನ್ನ, ಪುಳಿಯೋಗರೆ, ಉಪ್ಪಿಟ್ಟು ಮೊದಲಾದ ಆಹಾರ ಬೇಡ. ಯಾಕೆಂದರೆ ಎಣ್ಣೆ ಅಂಶವು ಅವುಗಳ ಮಿದುಳಿನಲ್ಲಿ ಹೊಸದೊಂದು ಬಗೆಯ ವಿಷಕಾರಿ ರಾಸಾಯನಿಕ ಅಂಶವನ್ನು ಉತ್ಪತ್ತಿ ಮಾಡುತ್ತದೆ. ಇದೇ ಕಾರಣಗಳಿಂದ ನಾಯಿಗೆ ಹುಚ್ಚು ಹಿಡಿಯುತ್ತದೆ.

* ಚಾಕೋಲೆಟ್‌, ಐಸ್‌ಕ್ರೀಮ್‌ ನೀಡಬಾರದು. ಯಾಕೆಂದರೆ ಚಾಕೋಲೆಟ್‌ನಲ್ಲಿರುವ ಕೋಕೋ ಅಂಶವು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಸೃಷ್ಟಿ ಮಾಡುತ್ತದೆ.

* ಮೊಟ್ಟೆ, ಮೀನು, ಮಾಂಸವನ್ನು ಬೇಯಿಸಿ ಕೊಡಬೇಕು. ಹಸಿಯಾಗಿ ಯಾವ ಮಾಂಸವನ್ನು ತಿನ್ನಲು ಕೊಡಬೇಡಿ. ಯಾಕೆಂದರೆ ಅವುಗಳ ಹೊಟ್ಟೆಯಲ್ಲಿ ಲಾಡಿ ಹುಳು ಆಗುವ ಸಂಭವವಿರುತ್ತದೆ.

* ಯಾವುದೇ ಆಹಾರವನ್ನು ನೀಡಿದರೂ ಅದರಲ್ಲಿ ಖಾರ, ಉಪ್ಪು, ಹುಳಿ ಅಂಶ ಸಾಧ್ಯವಾದಷ್ಟು ಕಡಿಮೆ ಇರಬೇಕು. ಈ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ನಾಯಿ ಬಹು ಬೇಗ ಚುರುಕಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read