ಉಗುರು ಕಚ್ಚುವ ಕೆಟ್ಟ ಅಭ್ಯಾಸ ನಿಮಗಿದ್ಯಾ….? ಇಲ್ಲಿದೆ ನೋಡಿ ಸುಲಭ ಮನೆಮದ್ದು

ಕೆಲವರಿಗೆ ಕೂತಲ್ಲಿ ನಿಂತಲ್ಲಿ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಒತ್ತಡ ಸಹ ಇದಕ್ಕೆ ಕಾರಣವಾಗಿರಬಹುದು. ಕೆಲವರು ಬಾಲ್ಯದಿಂದಲೂ  ಉಗುರು ಕಚ್ಚೋದನ್ನು ರೂಢಿ ಮಾಡಿಕೊಂಡಿರುತ್ತಾರೆ. ಈ ಕೆಟ್ಟ ಅಭ್ಯಾಸವನ್ನು ಬಿಡಲು ಸರಳ ಮನೆಮದ್ದುಗಳಿವೆ.

ಇದಕ್ಕೆ ಮೊದಲ ಚಿಕಿತ್ಸೆ ಅಂದ್ರೆ ನಿಮ್ಮ ಉಗುರುಗಳನ್ನು ಚಿಕ್ಕದಾಗಿಡಿ. ಹಾಗಿದ್ದಾಗ ಉಗುರು ಕಚ್ಚುವ ಪ್ರಮೇಯವೇ ಬರುವುದಿಲ್ಲ. ನಿಮಗೆ ಸೋಂಕು ತಗುಲುವುದಿಲ್ಲ. ಕೈಗಳನ್ನು ಅಂದವಾಗಿಟ್ಟುಕೊಳ್ಳಿ, ಉಗುರುಗಳು ನೋಡಲು ಸುಂದರವಾಗಿದ್ದರೆ ಅವುಗಳನ್ನು ಕಚ್ಚಲು ಮನಸ್ಸು ಬರುವುದಿಲ್ಲ.

ಉಗುರುಗಳಲ್ಲಿ ಕೆಟ್ಟ ರುಚಿಯಿರೋ ಬಣ್ಣವನ್ನು ಹಚ್ಚಿಕೊಳ್ಳಿ. ಉಗುರು ಕಡಿಯಬೇಕು ಎನಿಸಿದಾಗ ಕೆಟ್ಟ ರುಚಿ ತಗುಲಿ ಆ ಅಭ್ಯಾಸ ತಪ್ಪಿಹೋಗುತ್ತದೆ. ಉಗುರುಗಳನ್ನು ಬ್ಯಾಂಡೇಜ್‌ ನಿಂದ ಮುಚ್ಚಿ ಕೂಡ ಇಡಬಹುದು. ಹೀಗೆ ಮಾಡುವುದರಿಂದ್ಲೂ ಉಗುರು ಕಚ್ಚುವ ದುರಭ್ಯಾಸ ತಪ್ಪಿ ಹೋಗುತ್ತದೆ. ಉಗುರು ಕಚ್ಚಲು ನಿಮಗೆ ಯಾವಾಗ ಪ್ರಚೋದನೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಆ ಸಮಯದಲ್ಲಿ ಗಮನವನ್ನು ಬೇರೆಡೆಗೆ ತಿರುಗಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read